ETV Bharat / state

ಸಿಗರೇಟ್​ ಹಣ ಕೇಳಿದ್ದಕ್ಕೆ ಕುದಿಯುವ ಎಣ್ಣೆ ಮೇಲೆ ತಳ್ಳಿ ಎಸ್ಕೇಪ್​ ಆಗಿದ್ದ ರೌಡಿಶೀಟರ್​ ಹನೀಫ್​ ಅಂದರ್​ - sampigehalli police fired gun to rowdy sheeter

ಕಳೆದ ವಾರ ಅಂಗಡಿಯೊಂದರಲ್ಲಿ ಸಿಗರೇಟ್ ಸೇದಿರುವ ಹನೀಫ್​, ಹಣ ಕೇಳಿದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕುದಿಯುತ್ತಿದ್ದ ಎಣ್ಣೆ ಮೇಲೆ ತಳ್ಳಿ ಎಸ್ಕೇಪ್ ಆಗಿದ್ದ.‌‌ ಈ ಸಂಬಂಧ ಮಹಿಳೆ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು‌.

Sayyid Hanif
ರೌಡಿಶೀಟರ್ ಸಯ್ಯದ್ ಹನೀಫ್
author img

By

Published : Oct 3, 2020, 12:39 PM IST

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗೆ ಸಂಪಿಗೆಹಳ್ಳಿ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸಂಪಿಗೆಹಳ್ಳಿ ಠಾಣೆಯ ರೌಡಿಶೀಟರ್ ಸಯ್ಯದ್ ಹನೀಫ್​ (29) ಮೇಲೆ ಗುಂಡು ಹಾರಿಸಿದ ಪೊಲೀಸರು, ಆತನನ್ನು ತಮ್ಮ‌ ಸುಪರ್ದಿಗೆ ಪಡೆದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ವಾರ ಅಂಗಡಿಯೊಂದರಲ್ಲಿ ಸಿಗರೇಟ್ ಸೇದಿರುವ ಹನೀಫ್​, ಹಣ ಕೇಳಿದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕುದಿಯುತ್ತಿದ್ದ ಎಣ್ಣೆ ಮೇಲೆ ತಳ್ಳಿ ಎಸ್ಕೇಪ್ ಆಗಿದ್ದ.‌‌ ಈ ಸಂಬಂಧ ಮಹಿಳೆ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು‌.

ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಬಾಗಲೂರಿನಲ್ಲಿ ಆರೋಪಿ ಇರುವುದನ್ನು ಪತ್ತೆ ಹಚ್ಚಿ ಹಿಡಿಯಲು ಹೋಗಿದ್ದಾರೆ. ಈ ವೇಳೆ ಹನೀಫ್​ ಪೊಲೀಸ್ ಸಿಬ್ಬಂದಿಗೆ ಚಾಕು ಇರಿಯಲು ಮುಂದಾಗಿದ್ದಾನೆ‌. ಹಲವು ಬಾರಿ ವಾರ್ನ್ ಮಾಡಿದರೂ ಮಾತು ಕೇಳದಿದ್ದರಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.