ಬೆಂಗಳೂರು: ಜೆ.ಪಿ.ಪಾರ್ಕ್ ಆಟದ ಮೈದಾನ ಮತ್ತು ವಾರ್ಡ್ ಲಗ್ಗೆರೆ ಡಾ.ವಿಷ್ಣುವರ್ಧನ್ ಆಟದ ಮೈದಾನ(ರಾಕ್ಷಸಿಹಳ್ಳ)ದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ 30 ಅಡಿಗಳ ಶಿವನ ವಿಗ್ರಹ ಸ್ಥಾಪಿಸಿ ಆಹೋ ರಾತ್ರಿ ಜಾಗರಣೆ, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ಮುನಿರತ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಶವಂತಪುರದ ಕೊರೊನಾ ವಾರಿಯರ್ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಜೇಶ್ ಕೃಷ್ಣನ್ ಸ್ವರ ಸಂಭ್ರಮ ನಡೆಯುತ್ತಿದ್ದು, ಹಲವು ಹೆಸರಾಂತ ಗಾಯಕರಿಂದ ಹಾಡುಗಳ ಜಾಗರಣೆ ಬೆಳಗಿನವರೆಗೂ ನಡೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸಾಗರ ನೆರೆದಿದೆ.