ನೆಲಮಂಗಲ (ಬೆಂಗಳೂರು): ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಹಿರಿಯ ನಟ ಶಿವರಾಜ್ಕುಮಾರ್ ಭೇಟಿ ನೀಡಿದ್ದರು. ಶಿವಣ್ಣನ ಜೊತೆ ಪತ್ನಿ ಗೀತಾ ಕೂಡ ಇದ್ದರು. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿದ್ದ ಗಣ್ಯರು ಲೀಲಾವತಿಯವರ ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಟ ಶಿವರಾಜ್ಕುಮಾರ್, ನಮ್ಮ ದನಿ ಕಂಡು ಹಿಡಿಯುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿದ್ದೇನೆ. ಅಂದಿನಿಂದಲೂ ಅದೇ ಅತ್ಮೀಯತೆ, ಒಂದೊಳ್ಳೆ ಮನಸ್ಸಿರುವ ವ್ಯಕ್ತಿತ್ವ. ಈ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ವಿನೋದ್ ಅವರನ್ನು ನೋಡಿದಾಗಲೆಲ್ಲಾ ಅವರನ್ನೇ ನೋಡಿದಂತಾಗುತ್ತದೆ. ದೇವರ ಅಶೀರ್ವಾದ ಮತ್ತು ಜನರ ಪ್ರೀತಿ ಅವರೊಂದಿಗೆ ಇದೆ ಎಂದು ತಿಳಿಸಿದರು.
ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ: ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಡಾ. ಲೀಲಾವತಿಯವರಿಂದ ನಿರ್ಮಾಣ ಮಾಡಲಾಗಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.
-
ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಹಿರಿಯ ಚಿತ್ರನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿರುವ ಅವರ ಯೋಗಕ್ಷೇಮ ವಿಚಾರಿಸಿದೆ. ಚಿತ್ರರಂಗದಲ್ಲಿ ಅಪಾರ ಸೇವೆ ಮಾಡಿರುವ ಲೀಲಾವತಿ ಅವರಿಗೆ ಈ ವಯಸ್ಸಿನಲ್ಲೂ ಸಮಾಜ ಸೇವೆ ಮಾಡುವ ಅಪಾರ ಹಂಬಲವಿರುವುದು ನಿಜಕ್ಕೂ ಶ್ಲಾಘನೀಯ. pic.twitter.com/SWUCnYhTtA
— DK Shivakumar (@DKShivakumar) November 28, 2023 " class="align-text-top noRightClick twitterSection" data="
">ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಹಿರಿಯ ಚಿತ್ರನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿರುವ ಅವರ ಯೋಗಕ್ಷೇಮ ವಿಚಾರಿಸಿದೆ. ಚಿತ್ರರಂಗದಲ್ಲಿ ಅಪಾರ ಸೇವೆ ಮಾಡಿರುವ ಲೀಲಾವತಿ ಅವರಿಗೆ ಈ ವಯಸ್ಸಿನಲ್ಲೂ ಸಮಾಜ ಸೇವೆ ಮಾಡುವ ಅಪಾರ ಹಂಬಲವಿರುವುದು ನಿಜಕ್ಕೂ ಶ್ಲಾಘನೀಯ. pic.twitter.com/SWUCnYhTtA
— DK Shivakumar (@DKShivakumar) November 28, 2023ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಹಿರಿಯ ಚಿತ್ರನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿರುವ ಅವರ ಯೋಗಕ್ಷೇಮ ವಿಚಾರಿಸಿದೆ. ಚಿತ್ರರಂಗದಲ್ಲಿ ಅಪಾರ ಸೇವೆ ಮಾಡಿರುವ ಲೀಲಾವತಿ ಅವರಿಗೆ ಈ ವಯಸ್ಸಿನಲ್ಲೂ ಸಮಾಜ ಸೇವೆ ಮಾಡುವ ಅಪಾರ ಹಂಬಲವಿರುವುದು ನಿಜಕ್ಕೂ ಶ್ಲಾಘನೀಯ. pic.twitter.com/SWUCnYhTtA
— DK Shivakumar (@DKShivakumar) November 28, 2023
ಕಾರ್ಯಕ್ರಮದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ, ವಿನೋದ್ ರಾಜ್ ಅವರು 10 ದಿನಗಳ ಹಿಂದೆ ನನ್ನ ನಿವಾಸಕ್ಕೆ ಆಗಮಿಸಿ ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಆದರೆ ಚುನಾವಣಾ ಪ್ರಚಾರದಲ್ಲಿದ್ದ ಕಾರಣಕ್ಕೆ ಕಳೆದ ಭಾನುವಾರ ಉದ್ಘಾಟನೆ ಮಾಡಲು ಸಾಧ್ಯವಾಗಿಲ್ಲ. ಲೀಲಾವತಿ ಅಮ್ಮನವರು ನಾನು ಜೀವಂತವಾಗಿರುವಾಗಲೇ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸುವಂತೆ ಕೇಳಿಕೊಂಡಿದ್ದರು. ಅದರಂತೆ ನನ್ನ ಸರ್ಕಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಇಂದು ಅವರನ್ನು ಭೇಟಿ ಮಾಡಿ ಮಾತನಾಡಿಸಿದೆ. ಶುಭವಾಗಲಿ ಎಂದು ಹಾರೈಸಿದರು. ಅವರ ಆಸೆಯಂತೆ ಇಂದು ಆಸ್ಪತ್ರೆಯನ್ನು ಉದ್ಘಾಟಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಶ್ರವಣಕುಮಾರನಂತೆ ತಾಯಿಯ ಸೇವೆ ಮಾಡುತ್ತಿರುವ ವಿನೋದ್ ರಾಜ್
-
ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮತಿ ಎಂ.ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉದ್ಘಾಟಿಸಿ, ಮಾತನಾಡಿದೆ.
— DK Shivakumar (@DKShivakumar) November 28, 2023 " class="align-text-top noRightClick twitterSection" data="
ಹಿರಿಯ ನಟಿ ಶ್ರೀಮತಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್'ರವರು ನನ್ನ ನಿವಾಸಕ್ಕೆ ಬಂದು ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ… pic.twitter.com/JpaL2zNwXu
">ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮತಿ ಎಂ.ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉದ್ಘಾಟಿಸಿ, ಮಾತನಾಡಿದೆ.
— DK Shivakumar (@DKShivakumar) November 28, 2023
ಹಿರಿಯ ನಟಿ ಶ್ರೀಮತಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್'ರವರು ನನ್ನ ನಿವಾಸಕ್ಕೆ ಬಂದು ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ… pic.twitter.com/JpaL2zNwXuನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮತಿ ಎಂ.ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉದ್ಘಾಟಿಸಿ, ಮಾತನಾಡಿದೆ.
— DK Shivakumar (@DKShivakumar) November 28, 2023
ಹಿರಿಯ ನಟಿ ಶ್ರೀಮತಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್'ರವರು ನನ್ನ ನಿವಾಸಕ್ಕೆ ಬಂದು ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ… pic.twitter.com/JpaL2zNwXu
ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಇಂದು ಲೀಲಾವತಿಯವರು ಹಾಗೂ ವಿನೋದ್ ರಾಜ್ ಅವರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ಶ್ರೀಮಂತರು ಹಲವಾರು ರೀತಿಯಲ್ಲಿ ದಾನ, ಧರ್ಮ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಲೀಲಾವತಿಯವರು ಮೂಕ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿ ತೋರಿದ ಸಾಮಾಜಿಕ ಕಳಕಳಿ ಇದೆಲ್ಲವನ್ನೂ ಮೀರಿದ್ದು. 60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಲೀಲಾವತಿಯವರು, ಇಂದು ಸಾಮಾಜಿಕ ಸೇವೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪಶುಗಳ ಚಿಕಿತ್ಸೆಗಾಗಿ ಕಟ್ಟಿರುವ ಈ ಆಸ್ಪತ್ರೆ ಯಶಸ್ವಿಯಾಗಿ ನಡೆದುಕೊಂಡು ಹೋಗಲಿ ಎಂದು ಡಿಕೆಶಿ ಶುಭ ಹಾರೈಸಿದರು. ಜೊತೆಗೆ ಇದಕ್ಕೆ ಬೇಕಾದ ಬೆಂಬಲವನ್ನು ನೀಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಟ ದರ್ಶನ್
ಡಿಕೆಶಿ ಟ್ವೀಟ್: ''ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಹಿರಿಯ ಚಿತ್ರನಟಿ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿರುವ ಅವರ ಯೋಗಕ್ಷೇಮ ವಿಚಾರಿಸಿದೆ. ಚಿತ್ರರಂಗದಲ್ಲಿ ಅಪಾರ ಸೇವೆ ಮಾಡಿರುವ ಲೀಲಾವತಿ ಅವರಿಗೆ ಈ ವಯಸ್ಸಿನಲ್ಲೂ ಸಮಾಜ ಸೇವೆ ಮಾಡುವ ಅಪಾರ ಹಂಬಲವಿರುವುದು ನಿಜಕ್ಕೂ ಶ್ಲಾಘನೀಯ'' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.