ETV Bharat / state

ಫೋನ್ ಟ್ಯಾಪಿಂಗ್ ವಿಚಾರ: ತನಿಖೆ ನಡೆಸುವಂತೆ ಕಮಲ್ ಪಂತ್​​ಗೆ ಪತ್ರ ಬರೆದ ಡಿಕೆಶಿ

author img

By

Published : Aug 21, 2020, 7:12 PM IST

ಕಳೆದೆರಡು ದಿನಗಳಿಂದ ನನ್ನ ಮೊಬೈಲ್​ ಕರೆಗಳು ಕದ್ದಾಲಿಕೆಯಾಗುತ್ತಿರುವ ಬಗ್ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಬೆಂಗಳೂರು ನಗರ ಪೊಲೀಸ್​ ಕಮೀಷನರ್​ ಕಮಲ್​​ ಪಂತ್​ಗೆ ಪತ್ರ ಬರೆದಿದ್ದಾರೆ.​

Shivakumar
ಡಿಕೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ತಮ್ಮ ಮೊಬೈಲ್​​ ಫೋನನ್ನು ಯಾರೋ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಪತ್ರ ಬರೆದಿದ್ದಾರೆ.

Shivakumar
ಕಮಲ್ ಪಂತ್​​ಗೆ ಬರೆಯಲಾಗಿರುವ ಪತ್ರ

ಕಳೆದ ಎರಡು ಮೂರು ದಿನಗಳಿಂದ ನನ್ನ ಮೊಬೈಲ್​​ನಲ್ಲಿ ಮಾತನಾಡುವಾಗ ಬಹಳ ವ್ಯತ್ಯಾಸವಾಗುತ್ತಿದೆ. ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ, ಅನಪೇಕ್ಷಿತ ಏರಿಳಿತವಾಗುತ್ತದೆ, ಅನಗತ್ಯ ಶಬ್ದವೂ ಕೇಳಿ ಬರುತ್ತಿದೆ. ಇವುಗಳೆಲ್ಲವನ್ನು ಸಮೀಕರಿಸಿ ನೋಡಿದಾಗ ನನ್ನ ಮೊಬೈಲ್ ಕರೆಗಳ ಕದ್ದಾಲಿಕೆ ಆಗುತ್ತಿರಬಹುದು ಎಂದು ಬಲವಾಗಿ ಅನುಮಾನ ಮೂಡುತ್ತಿದೆ ಎಂದು ದೂರಿದ್ದಾರೆ.

ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಡಿಕೆಶಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.