ಬೆಂಗಳೂರು: ಶಿವಾಜಿನಗರ ಉಪಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಮುಕ್ತಾಯವಾಗಿದ್ದು, 26 ನಾಮಪತ್ರಗಳು ಸಿಂಧುವಾಗಿದ್ದು, 5 ನಾಮಪತ್ರಗಳು ತಿರಸ್ಕೃತವಾಗಿವೆ.
ಶಿವಾಜಿನಗರ ಉಪ ಕದನಕ್ಕೆ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಕೆಲವರು ಎರಡೆರಡು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಿಂಧು ಆದ ಕಾರಣ ಎರಡು ನಾಮಪತ್ರ ಸಲ್ಲಿಸಿದ್ದವರು ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 26 ಅಭ್ಯರ್ಥಿಗಳು ಶಿವಾಜಿನಗರ ಉಪಚುನಾವಣೆಗೆ ಸ್ಫರ್ಧಿಸಿರೋದಾಗಿ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವತಂತ್ರವಾಗಿ ಸ್ಪರ್ಧಿಸಿದ್ದ ಐವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ. ದಾಖಲಾತಿಗಳು ಸರಿಯಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ನಾಮಪತ್ರ ತಿರಸ್ಕರಿಸಿದ್ದಾರೆ.
ಚುನಾವಣಾಧಿಕಾರಿ ನಟೇಶ್ ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದ್ದು, ಈಗ ಅಂತಿಮವಾಗಿ 26 ಆಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ. ಇನ್ನು ನಾಮಪತ್ರ ಪರಿಶೀಲನೆ ವೇಳೆ ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್, ಪಕ್ಷೇತರ ಅಭ್ಯರ್ಥಿಗಳು ಉಪಸ್ಥಿತರಿದ್ದರು.