ETV Bharat / state

ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾದ 'ಶಿರಾ ಕ್ಷೇತ್ರ'... ಯಾಕೆ ಗೊತ್ತಾ? - Karnataka by-election 2020

ಮಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಬಯಲು ಸೀಮೆಯ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತದ ಉಪಚುನಾವಣೆಯ ಕೇಂದ್ರ ಬಿಂದು 'ಮದಲೂರು' ಕೆರೆ. ಇದೀಗ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೂರು ಪಕ್ಷಗಳು ಭಾರಿ ಹಣಾಹಣಿ ನಡೆಸಿದ್ದು, ಮದಲೂರು ಕೆರೆಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ.

shira-constituency-by-election-2020
ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾದ 'ಶಿರಾ ಕ್ಷೇತ್ರ'
author img

By

Published : Nov 3, 2020, 2:11 PM IST

ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಹಾಗಾಗಿ ಎಲ್ಲರೂ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದು ಕೊಂಡಿದ್ದಾರೆ.

ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದೇ, ಮಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಬಯಲು ಸೀಮೆಯ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತದ ಉಪಚುನಾವಣೆಯ ಕೇಂದ್ರ ಬಿಂದು 'ಮದಲೂರು' ಕೆರೆ. ಇದೀಗ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೂರು ಪಕ್ಷಗಳು ಭಾರಿ ಹಣಾಹಣಿ ನಡೆಸಿದ್ದು, ಮದಲೂರು ಕೆರೆಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿವೆ.

ಅಂದಾಜು 520 ಎಕರೆ ಪ್ರದೇಶದಲ್ಲಿರುವ ಈ ಕೆರೆ ಇಡೀ ಶಿರಾ ಉಪಚುನಾವಣೆಯ ಕೇಂದ್ರಬಿಂದು. ಮದಲೂರು ಕೆರೆ ನಡುವೆ ಕೃಷ್ಣಾ ಕೊಳ್ಳ- ಕಾವೇರಿ ಕೊಳ್ಳ ಗೊಂದಲ ಸೃಷ್ಟಿಯಾಗಿದ್ದು, ಹೇಮಾವತಿ ನದಿಯಿಂದ ಮದಲೂರು ಕೆರೆಗೆ ಈ ಹಿಂದೆ ನೀರು ಹರಿಸಲಾಗಿತ್ತು. ಆದರೆ, ಹೇಮಾವತಿ ನದಿ ನೀರು ಕಾವೇರಿ ಕೊಳ್ಳದ ವ್ಯಾಪ್ತಿ ಎಂಬ ಕಾರಣಕ್ಕೆ ಅದನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಇದರ ಹೆಗ್ಗಳಿಕೆಯನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿವೆ.

ಶಿರಾದ ಜನರು ಮದಲೂರು ಕೆರೆ ನೀರನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಮದಲೂರು ಕೆರೆಗೆ ನೀರು ಹರಿಸುವ ಕ್ರೆಡಿಟ್ ಪಡೆದುಕೊಳ್ಳುವುಕ್ಕಾಗಿ ಮೂರು ಪಕ್ಷಗಳ ನಾಯಕರು ಸೆಣಸಾಡುತ್ತಿದ್ದಾರೆ. ಬಹಿರಂಗ ಪ್ರಚಾರದಲ್ಲೂ ಇದೇ ವಿಚಾರ ಇಟ್ಟುಕೊಂಡು ಮತದಾರರನ್ನು ಸೆಳೆಯಲಾಗಿದೆ.

ಆದರೆ, ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ಈ ಯೋಜನೆ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆಯೂ ಆ ಕ್ಷೇತ್ರದ ಜನರಲ್ಲಿ ಮೂಡಿದೆ. ತುಮಕೂರು ಜಿಲ್ಲೆ 11 ಕ್ಷೇತ್ರಗಳನ್ನು ಒಳಗೊಂಡಂತೆ ಸುಮಾರು 27 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಮತದಾರರ ಸಂಖ್ಯೆ 20,83,891 ರಷ್ಟು ಇದ್ದು, ಇವರಲ್ಲಿ ಮಹಿಳಾ ಮತದಾರರು 10,86,352 ಇದ್ದರೆ, ಪುರುಷ ಮತದಾರರು 11,02,939 ರಷ್ಟಿದ್ದಾರೆ. ಜಾತಿವಾರು ಮತದಾರರಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದ್ದರೆ, ನಂತರದ ಸ್ಥಾನದಲ್ಲಿ ಒಕ್ಕಲಿಗರು, ಕುರುಬರು, ದಲಿತರು, ಇತರೆ ಹಿಂದುಳಿದ ಜಾತಿಗಳಿವೆ. ಅಲ್ಪಸಂಖ್ಯಾತ ಮತದಾರರ ಸಂಖ್ಯೆಯೂ ಜಿಲ್ಲೆಯಲ್ಲಿ 2 ಲಕ್ಷ ಕ್ಕೂ ಹೆಚ್ಚಿದೆ.

1999 ರ ಚುನಾವಣೆಯಲ್ಲಿ ಅಂದಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, 2004ರ ಚುನಾವಣೆಯಲ್ಲಿ ಜೆಡಿಎಸ್ 9 ಸ್ಥಾನಗಳಲ್ಲಿ ಆಯ್ಕೆಯಾಗಿತ್ತು. ಆದರೆ ಆನಂತರ 2008, 2013 ರಲ್ಲಿ ಯಾವುದೇ ಒಂದು ಪಕ್ಷಕ್ಕೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದಿನ ಗತ ವೈಭವಕ್ಕೆ ಮರಳಲು ಪ್ರಯತ್ನಿಸಿದರೆ, ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.

ಇನ್ನು ಪ್ರಮುಖವಾಗಿ ಚುನಾವಣಾ ಕೇಂದ್ರ ಬಿಂದುವಾಗಿರುವ ಶಿರಾ ಕ್ಷೇತ್ರದಿಂದ 2008, 2013 ರಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ. ಜಯಚಂದ್ರ ಅವರು ಗೆಲುವು ಸಾಧಿಸಿದ್ದರು. ಆದರೆ, 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು. ಜೆಡಿಎಸ್ ನ ಬಿ.ಸತ್ಯನಾರಾಯಣ ಅವರು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಎಸ್ .ಆರ್. ಗೌಡ ಮೂರನೇ ಸ್ಥಾನ ಪಡೆದಿದ್ದರು. ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಶಿರಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಟಿ.ಬಿ. ಜಯಚಂದ್ರ ಅವರನ್ನು ಸೋಲಿಸಿ ಬಿ. ಸತ್ಯನಾರಾಯಣ ಅವರು 11 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರು 14,681 ಮತಗಳ ಅಂತರದಿಂದ ಸತ್ಯನಾರಾಯಣ ಅವರನ್ನು ಮಣಿಸಿ ಗೆಲುವು ಸಾಧಿಸಿದ್ದರು. 2013 ರಲ್ಲಿ ಶೇ. 79.19 ರಷ್ಟು ಮತದಾನವಾಗಿತ್ತು. 2008 ರಲ್ಲೂ ಸಹ ಕಾಂಗ್ರೆಸ್ ನ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು 26,496 ಮತಗಳ ಅಂತರದಿಂದ ಸತ್ಯನಾರಾಯಣ ಅವರನ್ನು ಸೋಲಿಸಿದ್ದರು. 2008 ರಲ್ಲಿ ಶೇ. 84.31 ರಷ್ಟು ಮತದಾನವಾಗಿತ್ತು. 2018 ರಲ್ಲಿ ಶಿರಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,10,109 ಇದ್ದರು. ಈ ಪೈಕಿ ಪುರುಷ ಮತದಾರರು 1, 07, 960 ಇದ್ದರು. 1,02,138 ಮಹಿಳಾ ಮತದಾರರು ಇದ್ದರು. ಕಳೆದ ಬಾರಿ ಶೇ. 84 ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ. ಬಿಜೆಪಿ, ಎಸ್.ಆರ್. ಗೌಡ.ಜೆಡಿಎಸ್ ನಿಂದ ಬಿ. ಸತ್ಯನಾರಾಯಣ ಗೆಲುವು.

2020 ಉಪಚುನಾವಣೆ : ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಹಾಗೂ ಪಕ್ಷೇತರರು ಸೇರಿದಂತೆ 15 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಶಿರಾದಲ್ಲಿರುವ ಮತದಾರರೆಷ್ಟು?: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಿದ್ದು, ಇದರಲ್ಲಿ 1,10,281 ಪುರುಷರು, 1,05,034 ಮಹಿಳೆಯರು ಮತ್ತು 10 ಇತರ ಮತದಾರರಿದ್ದಾರೆ.

ಶಿರಾ ಕ್ಷೇತ್ರದಲ್ಲಿ 2008, 2013, 2018 ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ:

2008 : ಕಾಂಗ್ರೆಸ್- ಟಿ.ಬಿ.ಜಯಚಂದ್ರ- 60793.
ಜೆಡಿಎಸ್- ಬಿ.ಸತ್ಯನಾರಾಯಣ-34297.
2013: ಕಾಂಗ್ರೆಸ್- ಟಿ.ಬಿ.ಜಯಚಂದ್ರ- 74089.
ಜೆಡಿಎಸ್- ಬಿ.ಸತ್ಯನಾರಾಯಣ- 59408.
2018: ಜೆಡಿಎಸ್ -ಬಿ.ಸತ್ಯನಾರಾಯಣ- 74338.
ಕಾಂಗ್ರೆಸ್-ಟಿ.ಬಿ.ಜಯಚಂದ್ರ- 63973.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.