ಬೆಂಗಳೂರು: ಅಕ್ರಮ ಆಸ್ತಿ ಗಳಿಸಿದ ಆರೋಪದಡಿ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ಈ ಬಾರಿಯೂ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ. ಆದರೆ ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಅವರ ತಮಿಳುನಾಡು ಮೂಲದ ಅಭಿಮಾನಿಗಳು ಜೈಲಿಗೆ ಆರ್ಟಿಐ ಅಡಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ.?
ಜೈಲುವಾಸ ಅನುಭವಿಸುತ್ತಿರುವ ಶಶಿಕಲಾಗೆ ಈ ಬಾರಿ ಬಿಡುಗಡೆ ಭಾಗ್ಯವಿದೆಯಾ. ನ್ಯಾಯಾಲಯ ಶಶಿಕಲಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಹಾಗಾಗಿ ಈ ಬಾರಿ ಆಗಸ್ಟ್ನಲ್ಲಿ ಬಿಡುಗಡೆಯಾಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹೀಗಾಗಿ ಜೈಲಿನ ನಿಯಮದ ಪ್ರಕಾರ ಈ ಬಾರಿ ಶಶಿಕಲಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತಾ? ಅವರ ಜೈಲಿನ ಶಿಕ್ಷೆ ಅವಧಿ ಎಷ್ಟಿದೆ ಎಂಬುದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಆರ್ಟಿಐ ಅಡಿ ಬಂದಿರುವ ಪತ್ರವನ್ನು ನೋಡಿದ ಜೈಲಾಧಿಕಾರಿಗಳು ಯಾವುದೇ ರೀತಿಯಾದ ಪ್ರತಿಕ್ರಿಯೆ ನೀಡಿಲ್ಲ.
ಈ ಕುರಿತು ತಿಳಿಸಿರುವ ಜೈಲಾಧಿಕಾರಿ, ತಮಿಳುನಾಡಿನಿಂದ ಪತ್ರ ಬಂದಿದೆ. ಆದರೆ ಯಾರು ಕಳುಹಿಸಿದ್ದಾರೆ ಎಂಬುದರ ಬಗ್ಗೆ ತಿಳಿದಿಲ್ಲ. ಅವರ ಅಭಿಮಾನಿಗಳ ಬಳಗ ಕಳುಹಿಸಿರಬಹುದು ಎಂದರು.
2017 ಫೆಬ್ರವರಿಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಶಶಿಕಲಾ ಹಾಗೂ ಜೊತೆಗೆ ಇಳವರಸಿ, ಸುಧಾಕರನ್ ಕೂಡ ಜೈಲು ಪಾಲಾಗಿದ್ದರು. ಹಾಗೆ ಅವರ ನಡವಳಿಕೆ ಜೈಲಿನಲ್ಲಿ ಒಳ್ಳೆಯಯ ರೀತಿ ಇಲ್ಲದ ಕಾರಣ ಬಿಡುಗಡೆ ಮಾಡುವುದರ ಬಗ್ಗೆ ಅಧಿಕಾರಿಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗ್ತಿದೆ.