ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಸಜೆ ಅನುಭವಿಸಿ ಶಶಿಕಲಾ ನಟರಾಜನ್ ಬಿಡುಗಡೆಯಾಗಿದ್ದಾರೆ. ಅವರು ಜೈಲಿನಲ್ಲಿದ್ದಾಗ ಒಂದೂವರೆ ಸಾವಿರ ಪತ್ರಗಳ ಬಂದಿವೆ ಎಂಬ ವಿಚಾರ ತಿಳಿದು ಬಂದಿದೆ.
ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಿಂದ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಾಲ್ಕು ವರ್ಷಗಳ ಅವಧಿಯಲ್ಲಿ ಅಭಿಮಾನಿಗಳು ಪತ್ರ ಬರೆದು ಕಳುಹಿಸಿದ್ದು, ಶಶಿಕಲಾಗೆ ಬರೆದಿರುವ ಪತ್ರಗಳು ಬಹುತೇಕ ಅಭಿಮಾನಿಗಳಿಂದ ಬಂದಿರುವುದು ಕುತೂಹಲಕಾರಿಯಾಗಿದೆ.
ಓದಿ: ಸಿಂದಗಿ ಶಾಸಕ ಎಂಸಿ ಮನಗೂಳಿ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಹೆಚ್ಡಿ ದೇವೇಗೌಡ
ಜೈಲಿನ ಎರಡು ರಿಜಿಸ್ಟರ್ ಬುಕ್ನಲ್ಲಿ ಪ್ರತಿ ಪತ್ರಗಳ ಬಗ್ಗೆ ನಮೂದಿಸಲಾಗಿದ್ದು, ಒಂದೂವರೆ ಸಾವಿರ ಪೋಸ್ಟ್ ಮತ್ತು ಭೇಟಿ ನೀಡಿದ ವಿಸಿಟರ್ಸ್ಗಳ ಬಗ್ಗೆ ಪುಸ್ತಕದಲ್ಲಿ ಎಂಟ್ರಿಯಾಗಿದೆ. ಪತ್ರಗಳ ಜೊತೆಗೆ ಜಾರಿ ನಿರ್ದೇಶಾಲಯ (ಇಡಿ) ನೊಟೀಸ್ಗಳು ಬಂದಿವೆ. ಇಡಿಯಿಂದ ಬಂದಿರುವ ನೊಟೀಸ್ ಕೂಡ ಶಶಿಕಲಾಗೆ ನೀಡಿ ಆಕೆಯಿಂದ ಜೈಲು ಅಧಿಕಾರಿಗಳು ಅಕ್ನಾಲೆಜ್ಮೆಂಟ್ ಬರೆಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.