ETV Bharat / state

ಶರಾವತಿ ಜಲ ವಿದ್ಯುತ್ ಯೋಜನೆ ಪ್ರಶ್ನಿಸಿ ಪಿಐಎಲ್: ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್ - ಶರಾವತಿ ಕಣಿವೆ

ಯೋಜನೆ ಪ್ರಶ್ನಿಸಿ ಬಳ್ಳಾರಿಯ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ನ್ಯಾಯಾಲಯ ಈ ಹಿಂದೆ ಅಕ್ಟೋಬರ್ 26ರವರೆಗೂ ತಡೆಯಾಜ್ಞೆ ನೀಡಿತ್ತು. ಇದೀಗ ನವೆಂಬರ್ 4ರವರೆಗೆ ವಿಸ್ತರಿಸಿದೆ.

court
court
author img

By

Published : Oct 29, 2020, 5:48 PM IST

ಬೆಂಗಳೂರು: ಶರಾವತಿ ಕಣಿವೆಯಲ್ಲಿ ಉದ್ದೇಶಿತ ಭೂಗರ್ಭ ಜಲ ವಿದ್ಯುತ್ ಯೋಜನೆಯ ಸಮೀಕ್ಷೆ ಹಾಗೂ ಭೌಗೋಳಿಕ ತಾಂತ್ರಿಕ ಪರಿಶೋಧನೆ ಕಾಮಗಾರಿಗೆ ನೀಡಿದ್ದ ಮಧ್ಯಂತರ ತಜೆಯಾಜ್ಞೆಯನ್ನು ಹೈಕೋರ್ಟ್ ನವೆಂಬರ್ 4ರವರೆಗೆ ವಿಸ್ತರಿಸಿ ಆದೇಶಿಸಿದೆ.

ಯೋಜನೆ ಪ್ರಶ್ನಿಸಿ ಬಳ್ಳಾರಿಯ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ನ್ಯಾಯಾಲಯ ಈ ಹಿಂದೆ ಅಕ್ಟೋಬರ್ 26ರವರೆಗೂ ತಡೆಯಾಜ್ಞೆ ನೀಡಿತ್ತು. ಇದೀಗ ನವೆಂಬರ್ 4ರವರೆಗೆ ವಿಸ್ತರಿಸಿದೆ.

ಅರ್ಜಿದಾರರು, ಶರಾವತಿ ಕಣಿವೆಯಲ್ಲಿ ಉದ್ದೇಶಿತ ಭೂಗರ್ಭ ಜಲ ವಿದ್ಯುತ್ ಯೋಜನೆಯ ವ್ಯಾಪ್ತಿ ಪ್ರದೇಶವು ಅಪರೂಪದ ಪ್ರಾಣಿ ಸಂಕುಲವಿರುವ ಭೂಭಾಗವಾಗಿದೆ. ಇಲ್ಲಿ ಸಿಂಹದ ಬಾಲ ಹೋಲುವ ಸಿಂಗಳೀಕ ಎಂದು ಕರೆಯುವ ಮಂಗಗಳು ವಾಸಿಸುತ್ತಿವೆ. ಅಪಾಯದ ಅಂಚಿಗೆ ಸೇರಿರುವ ಜೀವ ವೈವಿಧ್ಯತೆಯಲ್ಲಿ ಈ ತಳಿಯೂ ಸೇರಿದೆ. ಆದ್ದರಿಂದ ಯೋಜನೆ ಮತ್ತು ಅದರ ಜಾರಿಗೆ ಸಮೀಕ್ಷೆ ನಡೆಸಲು 2020ರ ಮೇ 6ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುಮತಿ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.