ETV Bharat / state

ಒಕ್ಕಲಿಗ ಸಮುದಾಯಕ್ಕೆ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ ಶಾಸಕ ಶರತ್​ ಬಚ್ಚೇಗೌಡ - ಶರತ್​ ಬಚ್ಚೇಗೌಡ ರಾಜಕೀಯ ಪಯಣ

ಶಾಸಕ ಶರತ್​ ಬಚ್ಚೇಗೌಡ ಅವರು ಹೊಸಕೋಟೆ ಒಕ್ಕಲಿಗ ಸಮುದಾಯ ಸಂಘಕ್ಕೆ ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ.

ಶಾಸಕ ಶರತ್​ ಬಚ್ಚೇಗೌಡ
ಶಾಸಕ ಶರತ್​ ಬಚ್ಚೇಗೌಡ
author img

By

Published : Feb 15, 2023, 6:29 PM IST

ಹೊಸಕೋಟೆ: ಇಲ್ಲಿ ವಾಸವಿರುವ ಒಕ್ಕಲಿಗರ ಸಂಘಕ್ಕೆ ಶಾಸಕ ಶರತ್​ ಬಚ್ಚೆಗೌಡ ಕೋಟ್ಯಂತರ ರೂ ಬೆಲೆ ಬಾಳುವ ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿಯಲ್ಲಿರುವ ಸುಮಾರು 3 ಎಕರೆ 10 ಗುಂಟೆ ತಮ್ಮ ಜಮೀನನ್ನು ಶಾಸಕ ಬಚ್ಚೆಗೌಡ ಒಕ್ಕಲಿಗರ ಸಮುದಾಯಕ್ಕೆ ದಾನವಾಗಿ ನೀಡಿದ್ದಾರೆ. ಈ ಕುರಿತ ಮಾತನಾಡಿರುವ ಅವರು, ಇಲ್ಲಿ ಒಕ್ಕಲಿಗರ ಸಮುದಾಯಕ್ಕೆ ಸೇರಿದ ಸುಮಾರು 60 ಸಾವಿರ ಜನರಿದ್ದು, ಸಮಾಜಕ್ಕೆ ಅನುಕೂಲವಾಗುವಂತಹ ಕಟ್ಟಡ, ಶಾಲೆ, ಕಲ್ಯಾಣ ಮಂಟಪ ಅಥವಾ ಸಮುದಾಯ ಭವನದಂತಹ ಕಟ್ಟಡ ನಮ್ಮ ಸಮುದಾಯಕ್ಕೂ ಇರಲಿ ಎಂಬುದು ಒಕ್ಕಲಿಗೆ ಸುಮಾರು 16 ವರ್ಷಗಳ ಬೇಡಿಕೆಯಾಗಿದೆ.

ಅದು ಈ ವರೆಗೂ ಈಡೇರದೇ ಇದ್ದ ಕಾರಣ ಕಳೆದ ಬಾರಿ ಕೆಂಪೇಗೌಡರ ಜಯಂತಿಯಂದು ನಾನು ಇಲ್ಲಿಯ ಒಕ್ಕಲಿಗ ಸಮುದಾಯದ ಜನರಿಗೆ ಮಾತನ್ನು ನೀಡಿದ್ದೆ. ನನ್ನ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯಕ್ಕೆ ದಾನವಾಗಿ ನೀಡುವೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ನಾನು ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಇಂದು ಆ ಜಮೀನನ್ನು ಒಕ್ಕಲಿಗರ ಸಮುದಾಯಕ್ಕೆ ನೀಡಿದ್ದೇನೆ ಎಂದರು.

ಈ ಹಿಂದೆ ಸನ್ಮಾನ್ಯ ಬಚ್ಚೇಗೌಡರ ಕಾಲದಿಂದಲೂ ಇಲ್ಲಿ ಬಾಬಾ ಸಾಹೇಬ್​ ಅಂಬೇಡ್ಕರ್​ ಭವನ, ಕನಕ ಭವನ ಸೇರಿದಂತೆ ಬೇರೆ ಬೇರೆ ಸಮುದಾಯದವರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಆದರೆ ಈ ಸಮುದಾಯದ ಬಹುದಿನಗಳ ಬೇಡಿಕೆ ಹಾಗೇ ಉಳಿದಿದ್ದ ಕಾರಣ ಈಡೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಇರುವಂತಹ ಎಲ್ಲ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡಲಾಗುವುದು ಎಂದು ಶರತ್​ ಬಚ್ಚೇಗೌಡ ತಿಳಿಸಿದರು.

ಶರತ್​ ಬಚ್ಚೇಗೌಡ ರಾಜಕೀಯ ಪಯಣ: ಶರತ್ ತಂದೆ ಬಿ ಎನ್ ಬಚ್ಚೇಗೌಡ ಅವರು ಜನತಾದಳದ ಮೂಲಕ ರಾಜಕೀಯ ಬದುಕನ್ನು ಆರಂಭಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು ಗೆಲುವು ಸಾಧಿಸಿ, ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟಿಬಿ ನಾಗರಾಜ್ ವಿರುದ್ಧ ಸೋಲನ್ನು ಕಂಡರು. 2018 ರಲ್ಲಿ ತಂದೆ ಬದಲಿಗೆ ಅವರ ಪುತ್ರ ಶರತ್ ಬಚ್ಚೇಗೌಡ ಚುನಾವಣೆ ಕಣಕ್ಕಿಳಿದರು. ಇಲ್ಲಿಯು ಮತದಾರರು ಕೈ ನಾಯಕ ಎಂಟಿಬಿ ನಾಗರಾಜ್​ ಅವರ ಕೈ ಹಿಡಿದ ಕಾರಣ ಶರತ್​ ಬಚ್ಚೇಗೌಡ ಸೋಲನುಭವಿಸಿದರು.

2019ರಲ್ಲಿ ಎಂಟಿಬಿ ನಾಗರಾಜ್​ ಪಕ್ಷಕ್ಕೆ ರಾಜೀನಾಮೆ ಘೋಷಿಸಿ ಬಿಜೆಪಿಗೆ ಸೇರ್ಪಡೆಗೊಂಡು ಸಚಿವ ಸ್ಥಾನ ಅಲಂಕರಿಸಿದರು. ಶಾಸಕ ಸ್ಥಾನ ತೆರವಾದ ಕಾರಣ ಉಪಚುನಾವಣೆ ನಿಗದಿ ಪಡಿಸಲಾಯಿತು. ಅದರಂತೆ ಬಿಜೆಪಿಯಿಂದ ಸ್ಪರ್ಧಿಸಿದ ಎಂಟಿಬಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಶರತ್ ಚುನಾವಣೆ​ ಅಖಾಡಕ್ಕಿಳಿದರು. ಈ ವೇಳೆ, ಮತದಾರರು ಎಂಟಿಬಿ ನಾಗಾರಜ್​ ಅವರಿಗೆ ಬೆಂಬಲ ಸೂಚಿಸದೆ ಶರತ್​ ಅವರ ಕೈ ಹಿಡಿದರು. ಇದರಿಂದ ಎಂಟಿಬಿ ವಿರುದ್ಧ ಶರತ್​ ಬರೋಬ್ಬರಿ 11,486 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ: ಡಬಲ್​ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ: ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.