ಬೆಂಗಳೂರು: ಇಹಲೋಕ ತ್ಯಜಿಸಿದ ಹಿರಿಯ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ರಾಜ್ಯ ಸರ್ಕಾರದ ಪರವಾಗಿ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಪುಷ್ಪನಮನ ಸಲ್ಲಿಕೆ ಮಾಡಿದರು.
ಪ್ರಣಬ್ ಮುಖರ್ಜಿ ಅಂತ್ಯ ಸಂಸ್ಕಾರಕ್ಕೂ ಮುನ್ನ ನವದೆಹಲಿಯಲ್ಲಿ ಪಾರ್ಥೀವ ಶರೀರವನ್ನು ಗಣ್ಯರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರವಾಗಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಗೌರವ ಸಲ್ಲಿಕೆ ಮಾಡಿದರು.
ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಗುಣಮುಖರಾಗಿ ಬಂದಿರುವ ಸಿಎಂ ಯಡಿಯೂರಪ್ಪ ವೈದ್ಯರ ಸಲಹೆಯಂತೆ ದೆಹಲಿ ಪ್ರವಾಸದಿಂದ ದೂರ ಉಳಿದಿದ್ದು, ತಮ್ಮ ಪರವಾಗಿ ಶಂಕರ್ ಗೌಡ ಪಾಟೀಲ್ ಅವರನ್ನು ಕಳುಹಿಸಿಕೊಟ್ಟಿದ್ದರು.