ETV Bharat / state

ದೇವನಹಳ್ಳಿ ಏರ್​ಪೋರ್ಟ್​ ರಸ್ತೆಯಲ್ಲಿ ಸರಣಿ ಅಪಘಾತ: ವಾಹನಗಳು ಜಖಂ - bangalore news

ಹೆದ್ದಾರಿ 4ರ ಚಿಕ್ಕಜಾಲದಿಂದ ಡಾಂಬರೀಕರಣ ಮಾಡಲಾಗುತ್ತಿದೆ. ವಾಹನ ಸಂಚಾರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಬೇಜವಾಬ್ದಾರಿಯಾಗಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

serial accident at airport road
ವಾಹನಗಳು ಜಖಂ
author img

By

Published : Dec 11, 2020, 1:14 PM IST

ದೇವನಹಳ್ಳಿ: ಏರ್​ಪೋರ್ಟ್​ ರಸ್ತೆಯ ಫ್ಲೈ ಓವರ್​ನಲ್ಲಿ ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ಈ ಹಿನ್ನೆಲೆ ಸರಣಿ ಅಪಘಾತ ನಡೆದು ವಾಹನಗಳು ಜಖಂಗೊಂಡಿವೆ.

ಸರಣಿ ಅಪಘಾತದಿಂದ ವಾಹನಗಳು ಜಖಂ

ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ 4 ರ ಚಿಕ್ಕಜಾಲದಿಂದ ಡಾಂಬರೀಕರಣ ಮಾಡುತ್ತಿದ್ದರು. ಈ ಸಮಯದಲ್ಲಿ ಕಾರಿಗೆ ಅಡ್ಡವಾಗಿ ಡಾಂಬರೀಕರಣ ಕಾಮಗಾರಿ ಯಂತ್ರ ಬಂದಿದೆ. ಈ ಯಂತ್ರ ಅಡ್ಡ ಬಂದ ಹಿನ್ನೆಲೆ ಕಾರಿನ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಟಾಟಾ ಏಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಟಾಟಾ ಏಸ್ ಗೆ ಟಿಟಿ ವಾಹನ ಡಿಕ್ಕಿ, ಟಿಟಿ ವಾಹನಕ್ಕೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.

ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಬಂಧಿಸಿದ್ದು, ಈ ಎಲ್ಲಾ ವಾಹನಗಳು ಜಖಂಗೊಂಡಿವೆ. ಸರಣಿ ಅಪಘಾತದಿಂದ ಏರ್​ಪೋರ್ಟ್ ರಸ್ತೆಯಲ್ಲಿ ಕಿಲೋಮೀಟರ್ ದೂರದಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.