ಬೆಂಗಳೂರು: ಜಗತ್ತು ಹೊಸ ಆವಿಷ್ಕಾರಕ್ಕೆ ತೆರೆದುಕೊಳ್ಳುತ್ತಿದ್ದು, ಆತ್ಮ ನಿರ್ಭರ ಭಾರತ ಅಭಿಯಾನದಿಂದ ಪ್ರೇರಿತರಾಗಿ ಮೇಡ್ ಇನ್ ಇಂಡಿಯಾ - ಉರ್ಬ್ ಆಕ್ಸ್ ಸ್ಮಾರ್ಟ್ ಸೆನ್ಸಿಬಲ್ ಆಕ್ಸಿಜನ್ ಜನರೇಟರ್ನನ್ನು ಜೆಎಸ್ಎಲ್ಆರ್ ವೆಲ್ನೆಸ್ ಗ್ರೂಪ್ ಸಿದ್ಧಪಡಿಸಿದೆ.
ಜೆಎಸ್ಎಲ್ಆರ್ ವೆಲ್ನೆಸ್ ಗ್ರೂಪ್ಗೆ ಸೇರಿದ ಉರ್ಬ್ ಆಕ್ಸ್ ಇಂಡಿಯಾವು ಮಹಿಳಾ ಉದ್ಯಮಿಗಳ ಸಮೂಹವಾಗಿದೆ. ಮಾಲಿನ್ಯದ ಪ್ರಮಾಣ ಮತ್ತು ಅನಾರೋಗ್ಯಕರ ವಾಯು ಗುಣಮಟ್ಟವು ಜಾಗತಿಕವಾಗಿ ವಿಪರೀತವಾಗಿದೆ. ಹೀಗಾಗಿ ಸಾಕಷ್ಟು ಸಂಶೋಧನೆ ನಡೆಸಿ, ಉರ್ಬ್ ಆಕ್ಸ್ ಸ್ಮಾರ್ಟ್ ಸೆನ್ಸಿಬಲ್ ಆಕ್ಸಿಜನ್ ಜನರೇಟರ್ನನ್ನು ಸಿದ್ಧಪಡಿಸಲಾಗಿದೆ.
ಓದಿ:ಸಂಪತ್ ರಾಜ್ಗೆ ಸದ್ಯಕ್ಕಿಲ್ಲ ಜಾಮೀನು: ಜನವರಿಗೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಇದು ಆಕ್ಸಿಜನ್ ಕೊರತೆ ನಿಭಾಯಿಸಿ ಒಳಾಂಗಣದಲ್ಲಿ ಶುದ್ಧ ಮತ್ತು ತಾಜಾ ಆಮ್ಲಜನಕವನ್ನ ಬಿಡುಗಡೆ ಮಾಡಲಿದೆ. ಈ ಸಾಧನವೂ ಹೊಸದಾಗಿ ಉತ್ಪತ್ತಿಯಾಗುವ ಆಮ್ಲಜನಕ - ಸಮೃದ್ಧ ಗಾಳಿಯಲ್ಲಿ ಉಸಿರಾಡಲು ಒಳಗಿರುವವರಿಗೆ ಅವಕಾಶ ಮಾಡಿಕೊಡುತ್ತದೆ. ಕಡಿಮೆ ಶಕ್ತಿಯ ಬಳಕೆ ಮತ್ತು ಕಡಿಮೆ ಶಬ್ಧದೊಂದಿಗೆ ತಾಜಾ ಆಮ್ಲಜನಕವನ್ನು ಉತ್ಪಾದಿಸಲು ವರ್ಷಕ್ಕೆ 245 ದಿನವೂ ನಿರಂತರವಾಗಿ ಚಲಾಯಿಸಬಹುದಾಗಿದೆ.