ETV Bharat / state

ಮಂಡ್ಯದಲ್ಲಿ ಈ ಬಾರಿ ಬಿಜೆಪಿಗೆ ಸೆನ್ಸೇಷನಲ್ ಸರ್ಪ್ರೈಸ್‌ ರಿಸಲ್ಟ್: ಸುಮಲತಾ - ಸಂಸದೆ ಸುಮಲತಾ

ಮಂಡ್ಯದಲ್ಲಿ ಕುಮಾರಸ್ವಾಮಿ ಮಾತ್ರವಲ್ಲ, ಯಾರೇ ಬಂದರೂ ನಮ್ಮ ಅಭ್ಯರ್ಥಿ ಸ್ಟ್ರಾಂಗ್ ಇದ್ದಾರೆ, ಗೆದ್ದೇ ಗೆಲ್ತಾರೆ ಎಂದು ಸಂಸದೆ ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು.

MP Sumalatha spoke to journalists.
ಸಂಸದೆ ಸುಮಲತಾ ಪತ್ರಕರ್ತರೊಂದಿಗೆ ಮಾತನಾಡಿದರು.
author img

By

Published : Apr 16, 2023, 10:52 PM IST

Updated : Apr 16, 2023, 11:00 PM IST

ಸಂಸದೆ ಸುಮಲತಾ ಪತ್ರಕರ್ತರೊಂದಿಗೆ ಮಾತನಾಡಿದರು.

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮತದಾರರು ಮತ್ತು ಅಂಬರೀಷ್ ಅಭಿಮಾನಿಗಳು ಬಿಜೆಪಿ ಪರ ಇದ್ದು, ಸೆನ್ಸೇಷನಲ್ ಫಲಿತಾಂಶ ಬರಲಿದೆ. ಫಲಿತಾಂಶ ಎಲ್ಲರಿಗೂ ಸರ್ಪ್ರೈಸ್‌ ಆಗಿರಲಿದೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ನಮ್ಮ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡ್ತಾರೆ. ಅದರ ವಿಚಾರವಾಗಿ ನಾವು ಯಾರು ಏನು ಮಾಡಬೇಕು ಅಂತಾ ಚರ್ಚೆ ಮಾಡಿದ್ವಿ. ಪ್ರಚಾರ ಯಾವ ರೀತಿ ಮಾಡಬೇಕು ಅಂತಾ ಚರ್ಚೆ ಆಗಿದೆ. ತುಂಬಾ ಸಂಕ್ಷಿಪ್ತವಾಗಿ ಎಲ್ಲ ವಿಚಾರಗಳೂ ಚರ್ಚೆಯಾಗಿವೆ ಎಂದರು.

ಮಂಡ್ಯ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಬರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಮಂಡ್ಯದಲ್ಲಿ ನಮಗೆ ಸಂಪೂರ್ಣ ವಿಶ್ವಾಸ ಇದೆ. ಕುಮಾರಸ್ವಾಮಿ ಮಾತ್ರವಲ್ಲ, ಯಾರೇ ಬಂದರೂ ಹೇಗೆ ಸೋಲಿಸಬೇಕು ಅಂತಾ ನಾವು ರೆಡಿ ಇದ್ದೇವೆ. ಯಾರು ಬಂದರೂ ಅಲ್ಲಿ ನಮ್ಮ ಅಭ್ಯರ್ಥಿ ಸ್ಟ್ರಾಂಗ್ ಇದ್ದಾರೆ, ಗೆದ್ದೇ ಗೆಲ್ಲುತ್ತಾರೆ. ಅದಕ್ಕೆ ಬೇಕಾದ ಚುನಾವಣಾ ತಂತ್ರಗಾರಿಕೆ ನಮ್ಮ ಬಳಿಯೂ ಸಿದ್ದವಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಊಹಿಸದ ರೀತಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಹುತೇಕ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ, ನಾನು ಕೂಡ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತೇನೆ. ನಮ್ಮ ಕ್ಷೇತ್ರದ ಮತದಾರರು ಮತ್ತು ಅಂಬರೀಷ್ ಅಭಿಮಾನಿಗಳು ಬಿಜೆಪಿ ಪರ ಇದ್ದಾರೆ ಎಂದು ಹೇಳಿದರು.

ಇದನ್ನೂಓದಿ: ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್​ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ

Last Updated : Apr 16, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.