ETV Bharat / state

ಸಂಧಾನ ಸಭೆಯಲ್ಲಿ ಸಿಎಂ ಮುಂದೆಯೇ ಕಿತ್ತಾಡಿದ ಕತ್ತಿ-ಸವದಿ: ಮೂಕ ಪ್ರೇಕ್ಷಕರಾದ್ರಾ ಬಿಎಸ್​ವೈ? - kannadanews

ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಖಾತೆಗಳಿಗಾಗಿ ಹಿರಿಯ ಸಚಿವರು ಕೊನೆ ಹಂತದ ಲಾಭಿ ನಡೆಸಿದ್ದು,ಸಿಎಂ ಎದುರೇ ಖಾತೆಗಾಗಿ ಜಟಾಪಟಿ ನಡೆಸಿದ್ದಾರೆ.

ಸಿಎಂ ನಿವಾಸಕ್ಕೆ‌ ಸಚಿವರ ದಂಡು
author img

By

Published : Aug 24, 2019, 9:30 PM IST

Updated : Aug 24, 2019, 11:08 PM IST

ಬೆಂಗಳೂರು: ಖಾತೆ ಹಂಚಿಕೆಗೆ ಲಾಬಿ ನಡೆಸಲು ಸಿಎಂ ಬಿಎಸ್​ವೈ ನಿವಾಸಕ್ಕೆ ಆಗಮಿಸಿದ ಹಿರಿಯ ಸಚಿವರು ಸಿಎಂ ಎದುರಿಗೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ತಮ್ಮ ನಿವಾಸದಲ್ಲಿ ಉಮೇಶ್ ಕತ್ತಿ ಮನವೊಲಿಸಲು ಸಿಎಂ ನಡೆಸಿದ ಎರಡನೇ ಯತ್ನವೂ ವಿಫಲವಾಗಿದೆ. ಉಮೇಶ್ ಕತ್ತಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಸಿಎಂ, ನಂತರ ಸಚಿವ ಲಕ್ಷ್ಮಣ ಸವದಿಯನ್ನು ಕರೆಸಿಕೊಂಡು‌ ಇಬ್ಬರೊಂದಿಗೂ ಮಾತುಕತೆ ನಡೆಸಿದರು. ಆದರೆ ಸಂಧಾನದ ಬದಲು ಅಲ್ಲಿ ಜಗಳವೇ ನಡೆದು ಹೋಗಿದೆ. ಯಡಿಯೂರಪ್ಪ ಎದುರೇ ಉಮೇಶ್ ಕತ್ತಿ - ಲಕ್ಷ್ಮಣ್ ಸವದಿ ನಡುವೆ ಜಟಾಪಟಿ ನಡೆದಿದೆ. ಸಚಿವ ಸ್ಥಾನ ತಪ್ಪಿದ್ದಕ್ಕೂ ನನಗೂ ಸಂಬಂಧವಿಲ್ಲ,ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದೆ, ನನ್ನ ವಿಚಾರಕ್ಕೆ ಯಾಕ್ ಬರ್ತೀರಾ ಎಂದು ಸಚಿವ ಸವದಿ ಕತ್ತಿಗೆ ಕೇಳಿದ್ದಾರೆ, ಸವದಿ ಮಾತಿನಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು, ಹೈಕಮಾಂಡ್​ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀ ನಿನ್ನ ಹಾಗೆ ಇನ್ನೊಬ್ಬರ ಶಿಫಾರಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ನಿವಾಸದಲ್ಲಿ ಸಂಧಾನ ಸಭೆ

ಇಬ್ಬರನ್ನೂ ಸಮಾಧಾನ ಮಾಡಲು ಹೈರಾಣಾದ ಸಿಎಂ ಮನವೊಲಿಕೆ ಮಾಡುವಲ್ಲಿ ವಿಫಲರಾದರು. ಕೊನೆಗೆ ಏನಾದ್ರೂ ಮಾಡಿಕೊಳ್ಳಿ ನನ್ನ ದಾರಿ ನನಗೆ ಎಂದು ಕತ್ತಿ ಸಿಟ್ಟಿನಿಂದ ಹೊರಟರು ಎನ್ನಲಾಗಿದೆ. ಯಡಿಯೂರಪ್ಪ ನಿವಾಸದಿಂದ ಸಿಟ್ಟಿಂದ ಹೊರಬಂದ ಉಮೇಶ್ ಕತ್ತಿ, ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ಕೇಳಿದ್ರೆ ಮಾಧ್ಯಮಗಳ ವಿರುದ್ಧವೂ ಸಿಟ್ಟಿನಿಂದಲೇ ಮಾತನಾಡಿ ತೆರಳಿದರು.ಇತ್ತ ನೂತನ ಸಚಿವರಾದ ವಿ. ಸೋಮಣ್ಣ,ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಸಿಎಂ ಜೊತೆ ಖಾತೆಗಾಗಿ ಲಾಬಿ ನಡೆಸಿದ್ದಾರೆ. ಇನ್ನೂ ಡಿಸಿಎಂ ಹುದ್ದೆಗಳ ಸಂಬಂಧವೇ ಯಡಿಯೂರಪ್ಪ ಲಕ್ಷ್ಮಣ ಸವದಿ, ಅಶ್ವತ್ಥ್​ ನಾರಾಯಣ ಮತ್ತು ಕಾರಜೋಳ ಅವರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಈ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಇದರ ಬಗ್ಗೆ ವಿವರ ನೀಡಲು ನಾಯಕರು ನಿರಾಕರಿಸಿದರು.

Intro:

ಬೆಂಗಳೂರು: ನೂತನ ಸಚಿವರ ಖಾತೆಗಳ ಹಂಚಿಕೆ ಸಂಬಂಧ ವರಿಷ್ಠರೊಂದಿಗೆ ಮಾತುಕತೆ ನಡೆಸಿ ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಸಚಿವರು ಭೇಟಿ ನೀಡಿದ್ದು ಖಾತೆಗಳ ಲಾಭಿ ನಡೆಸಿದರು.

ನೂತನ ಸಚಿವರಾದ ವಿ. ಸೋಮಣ್ಣ,ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಬೆಳಗ್ಗೆ ಸಿಎಂ ನಿವಾಸಕ್ಕೆ ಭೇಟಿ ನೀಡಿದರು.‌ಸಿಎಂ ಜೊತೆ ಚರ್ಚೆ ನಡೆಸಿದರು.ಖಾತೆಗಳಿಗಾಗಿ ಹಿರಿಯ ಸಚಿವರು ಕೊನೆ ಹಂತದ ಲಾಭಿ ನಡೆಸಿದರು.

ಇನ್ನು ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಮುನಿಸಿಕೊಂಡಿದ್ದ ಕೆ.ಜಿ ಬೋಪಯ್ಯ ಅಸಮಧಾನದ ನಂತರ ಮೊದಲ ಬಾರಿಗೆ ಸಿಎಂ ನಿವಾಸಕ್ಕೆ ಭೇಟಿ ನೀಡಿದರು. ಬಿಎಸ್ವೈ ಭೇಟಿ ಮಾಡಿ ಮಾತುಕತೆ ನಡೆಸಿ ತಮ್ಮ ಬೇಸರ ತೋಡಿಕೊಂಡಿರು.ಆದರೆ ಮಾತುಕತೆ ಕುರಿತು ಮಾಹಿತಿ ಬಹಿರಂಗಪಡಿಸಲು ಬೋಪಯ್ಯ ನಿರಾಕರಿಸಿದರು.

ಇನ್ನು ಸಿಎಂ ನಡೆಸಿದ ಉಮೇಶ್ ಕತ್ತಿ ಮನವೊಲಿಕೆಯ ಎರಡನೇ ಯತ್ನವೂ ವಿಫಲವಾಯಿತು.ಉಮೇಶ್ ಕತ್ತಿ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಸಿಎಂ ನಂತರ ಸಚಿವ
ಲಕ್ಷ್ಮಣ ಸವದಿಯನ್ನು ಕರೆಸಿಕೊಂಡು‌ ಇಬ್ಬರೊಂದಿಗೂ ಮಾತುಕತೆ ನಡೆಸಿದರು.ಆದರೆ ಸಂಧಾನದ ಬದಲು
ಯಡಿಯೂರಪ್ಪ ಎದುರೇ ಉಮೇಶ್ ಕತ್ತಿ - ಲಕ್ಷ್ಮಣ್ ಸವದಿ ಜಟಾಪಟಿ ನಡೆದಿದೆ. ಪರಸ್ಪರ ಜೋರು ಮಾತುಗಳಿಂದ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಸಚಿವ ಸ್ಥಾನ ತಪ್ಪಿದ್ದಕ್ಕೂ ನನಗೂ ಸಂಬಂಧವಿಲ್ಲ, ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದೆ, ನನ್ನ ವಿಚಾರಕ್ಕೆ ಯಾಕ್ ಬರ್ತೀರಾ ಎಂದು ಸಚಿವ ಸವದಿ ಕತ್ತಿಗೆ ಕೇಳಿದ್ದಾರೆ, ಸವದಿ ಮಾತಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು
ಹೈಕಮಾಂಡ್ ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀ
ನಿನ್ನ ಹಾಗೆ ಇನ್ನೊಬ್ಬರ ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು ಸವದಿ ವಿರುದ್ಧ ಸಿಟ್ಟಲ್ಲಿ ವಾಗ್ದಾಳಿ ನಡೆಸಿದರು.

ಇಬ್ಬರನ್ನೂ ಸಮಾಧಾನ ಮಾಡಲು ಹೈರಾಣಾದ ಸಿಎಂ ಮನವೊಲಿಕೆ ಮಾಡುವಲ್ಲಿ ವಿಫಲರಾದರು. ಕೊನೆಗೆ ಏನಾದ್ರೂ ಮಾಡಿಕೊಳ್ಳಿ ನನ್ನ ದಾರಿ ನನಗೆ ಎಂದು ಕತ್ತಿ ಸಿಟ್ಟಿನಿಂದ ಹೊರಟರು ಎನ್ನಲಾಗಿದೆ.

ಯಡಿಯೂರಪ್ಪ ನಿವಾಸದಿಂದ ಸಿಟ್ಟಿಂದ ಹೊರಬಂದ ಉಮೇಶ್ ಕತ್ತಿ, ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ಕೇಳಿದ್ರೆ ಮಾಧ್ಯಮಗಳ ವಿರುದ್ಧವೂ ಸಿಟ್ಟಿನಿಂದಲೇ ಮಾತನಾಡಿ ತೆರಳಿದರು.

ಇದರ‌ ನಡುವೆ ಡಿಸಿಎಂ ಹುದ್ದೆಗಳ ಸಂಬಂಧ ಸಿಎಂ ಸಭೆ ನ‌ಡೆಸಿದರು.ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯದವರಿಗೆ ಡಿಸಿಎಂ ಹುದ್ದೆ ನೀಡಬೇಕು ಎನ್ನುವ ಚಿಂತನೆ ಇರುವ ಸಂಬಂಧ ಚರ್ಚೆ ನಡೆಸಿದರು.

ಡಿಸಿಎಂ ಹುದ್ದೆಗಳ ಸಂಬಂಧವೇ ಯಡಿಯೂರಪ್ಪ ಲಕ್ಷ್ಮಣ ಸವದಿ, ಅಶ್ವಥ ನಾರಾಯಣ ಮತ್ತು ಕಾರಜೋಳ ಅವರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಈ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಆದರೆ ಇದರ ಬಗ್ಗೆ ವಿವರ ನೀಡಲು ನಾಯಕರು ನಿರಾಕರಿಸಿದರು.

ಮಧ್ಯಾಹ್ನದವರೆಗೂ ಬಿಡುವಿಲ್ಲದ ರಾಜಕೀಯ‌ ಚಟುವಟಿಕೆಯ ತಾಣವಾಗಿದ್ದ ಸಿಎಂ ನಿವಾಸ ಅರುಣ್ ಜೇಟ್ಲಿ ನಿಧನದ ವಾರ್ತೆ ತಿಳಿಯುತ್ತಲೇ ಸ್ತಬ್ಧವಾಯಿತು.ಸಭೆ,ಅತಿಥಿಗಳ ಭೇಟಿಗೆ ತೆರೆ ಎಳೆಯಲಾಯಿತು. ಅಸಮಧಾನ ಶಮನ ಹಾಗು ಖಾತೆಗಳ ಹಂಚಿಕೆ ವಿಚಾರವೂ ತೆರೆಗೆ ಸರಿಯಿತು.Body:.Conclusion:
Last Updated : Aug 24, 2019, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.