ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಏಳನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಏಳನೇ ಆವೃತ್ತಿಯ ರಿಯಾಲಿಟಿ ಶೋಗೆ ಯಾರ್ಯಾರು ಎಂಟ್ರಿ ಕೊಡ್ತಾರೆ ಅನ್ನೋ ಕುತೂಹಲ ಕರುನಾಡ ಜನರನ್ನತಿ ಕಾಡುತ್ತಿದೆ. ಆದರೆ ಈಗ ಬಿಗ್ ಬಾಸ್ ಸ್ಪರ್ಧಿಗಳ ವಿಚಾರವಾಗಿ ಬಿಗ್ ಎಕ್ಸ್ಕ್ಲ್ಯೂಸಿವ್ ವಿಚಾರವೊಂದು 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.
ಏಳನೇ ಆವೃತ್ತಿ ಬಿಗ್ ಬಾಸ್ ಶೋಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಬಲ್ಲ ಮೂಲಗಳ ಪ್ರಕಾರ ಈಗಾಗಲೇ ಕಲರ್ಸ್ ವಾಹಿನಿಯ ಜೊತೆ ರವಿಬೆಳಗೆರೆ ಒಪ್ಪಂದ ಮಾಡಿಕೊಂಡಿದ್ದು, ಬಿಗ್ ಬಾಸ್ಗೆ ಎಂಟ್ರಿ ಕೊಡೋದಕ್ಕೆ ಅವರು ರೆಡಿಯಾಗಿದ್ದಾರೆ.
ಕಳೆದ ಸೀಸನ್ನಲ್ಲಿ ಬಿಗ್ ಬಾಸ್ ಟಿಆರ್ಪಿ ವಿಚಾರವಾಗಿ ಕೊಂಚ ಎಫೆಕ್ಟ್ ಆಗಿತ್ತು. 6ನೇ ಆವೃತ್ತಿಯನ್ನು ಕೂಡಾ ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದರು. ಟಿಆರ್ಪಿ ವಿಚಾರದಲ್ಲಿ ಬಿಗ್ಬಾಸ್ ಸ್ವಲ್ಪ ಮಂಕಾದ ಕಾರಣ, ಕಲರ್ಸ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ಸ್ವಲ್ಪ ತಲೆಕೆಡಿಸಿಕೊಂಡು ಈ ಬಾರಿ ಬಿಗ್ ಬಾಸ್ಗೆ ಭರ್ಜರಿ ಬೇಟೆಯಾಡಿದ್ದಾರೆ. 'ಹಾಯ್ ಬೆಂಗಳೂರು' ಪೇಪರ್ ಹಾಗೂ ಯೂಟ್ಯೂಬ್ ಚಾನಲ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ರವಿ ಬೆಳಗೆರೆ, ಟಿಆರ್ಪಿ ವಿಚಾರದಲ್ಲಿ ಪಕ್ಕಾ ವರ್ಕೌಟ್ ಆಗ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡಿರುವ ಪರಮೇಶ್ ಗುಂಡ್ಕಲ್, ಏಳನೇ ವೃತ್ತಿಯ ಬಿಗ್ ಬಾಸ್ಗೆ ಪತ್ರಕರ್ತ ರವಿ ಬೆಳಗೆರೆಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ
ಇನ್ನು ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಒಂದು ವಾರದಿಂದ ಪರಮೇಶ್ ಗುಂಡ್ಕಲ್ ಹಾಯ್ ಬೆಂಗಳೂರು ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸುದ್ದಿಗೆ ಪುರಾವೆ ಸಿಕ್ಕಂತಾಗಿದೆ.. ಒಟ್ಟಿನಲ್ಲಿ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ನಿದ್ದೆ ಕೆಡಿಸಿದ್ದ ಹಿರಿಯ ಪತ್ರಕರ್ತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಯಾವ ಬ್ರೇಕಿಂಗ್ ನ್ಯೂಸ್ ಕೊಡ್ತಾರೋ ಎಂಬ ಕುತೂಹಲ ಮೂಡಿದೆ.