ETV Bharat / state

ಕೋವಿಡ್ ಚಿಕಿತ್ಸೆ ನೀಡಲು ಹಿರಿಯ ವೈದ್ಯರ ಹಿಂದೇಟು.. ಸಮಸ್ಯೆ ಬಗೆಹರಿಸುವುದಾಗಿ ಡಿಸಿಎಂ ಭರವಸೆ

ಅಗತ್ಯವಾದಷ್ಟು ಸಿಬ್ಬಂದಿ - ವೈದ್ಯರು ಇದ್ದರೂ ಕೂಡಾ ಎಲ್ಲರೂ ಕೋವಿಡ್ ಚಿಕಿತ್ಸೆಗೆ ಮುಂದಾಗದೇ ಇರುವುದು ಉಳಿದ ವೈದ್ಯರ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಕೋವಿಡ್ ಚಿಕಿತ್ಸೆ ನೀಡಲು ಬಹುತೇಕ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

KC General hospital
ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ
author img

By

Published : Apr 12, 2021, 6:19 PM IST

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ವ್ಯಾಪ್ತಿಗೆ ಬರುವ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಜೊತೆಗೆ, ಪಶ್ಚಿಮ ವಲಯದ ಪ್ರಮುಖ ಕೋವಿಡ್ ಆಸ್ಪತ್ರೆಯೂ ಆಗಿದೆ. ಕಳೆದ ವರ್ಷ ಕೋವಿಡ್ ಆರಂಭವಾದಾಗ ಲಾಕ್​​ಡೌನ್ ಹೇರಿದ ಹಿನ್ನೆಲೆ ಹೆಚ್ಚಿನ ಬೆಡ್​​​ಗಳನ್ನು ಕೋವಿಡ್​​​​ಗೆಂದೇ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಇದರಿಂದ ಬೆಡ್ ಸಮಸ್ಯೆಯ ಜೊತೆಗೆ ಸಿಬ್ಬಂದಿ ಕೊರತೆಯೂ ಉಲ್ಬಣವಾಗುತ್ತಿದೆ.

ಕೊರೊನಾ ಚಿಕಿತ್ಸೆ ಕುರಿತು ಡಿಸಿಎಂ ಅಶ್ವತ್ಥ್ ನಾರಾಯನ್ ಮಾಹಿತಿ

ಹೆಚ್ಚಿನ ವೈದ್ಯರು 50 ವರ್ಷ ಮೇಲ್ಪಟ್ಟವರಾಗಿರುವುದರಿಂದ ಹೆಚ್ಚಿನವರಿಗೆ ಡಯಾಬಿಟಿಸ್ ಮುಂತಾದ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಕೋವಿಡ್ ಚಿಕಿತ್ಸೆ ನೀಡಲು ಬಹುತೇಕ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆ.ಸಿ ಜನರಲ್ ವೈದ್ಯರೊಬ್ಬರು ತಿಳಿಸಿದರು. ಅಗತ್ಯವಾದಷ್ಟು ಸಿಬ್ಬಂದಿ - ವೈದ್ಯರು ಇದ್ದರೂ ಕೂಡಾ ಎಲ್ಲರೂ ಕೋವಿಡ್ ಚಿಕಿತ್ಸೆಗೆ ಮುಂದಾಗದೇ ಇರುವುದು ಉಳಿದ ವೈದ್ಯರ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ.

ಎಷ್ಟೋ ವೈದ್ಯರು ದಿನದ 18 ಗಂಟೆಯೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಾಗಾಗಿದೆ. ಆದರೆ, ಕೆಲವರು ಮಾತ್ರ ಅನಾರೋಗ್ಯದ ನೆಪವೊಡ್ಡಿ, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ಹಿಂದೆ ಉಳಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಐಸಿಯು ಬೆಡ್ ಏರಿಕೆ

ಜೊತೆಗೆ ನಗರದಲ್ಲಿ ಬೆಡ್ ಕೊರತೆ ವಿಚಾರವನ್ನು ಅಲ್ಲಗಳೆದ ಸಚಿವ ಅಶ್ವತ್ಥ ನಾರಾಯಣ್, ಕೆ.ಸಿ ಜನರಲ್ ಆಸ್ಪತ್ರೆಗೆ ಹೆಚ್ಚು ಹೊರೆ ಮಾಡುತ್ತಿಲ್ಲ. ವ್ಯವಸ್ಥೆ ಅನುಸಾರವಾಗಿ ಮಾಡುತ್ತಿದ್ದೇವೆ. 50 ಐಸಿಯು ಬೆಡ್​​ 100ಕ್ಕೆ ಏರಿಕೆ ಮಾಡಲಾಗ್ತಿದೆ ಎಂದರು.

ಅಲ್ಲದೆ 450 ಕೋವಿಡ್ ಹಾಸಿಗೆಗಳಲ್ಲಿ 350 ನಾನ್ ಕೋವಿಡ್​​​ಗೆ (ರೆಗ್ಯುಲರ್), 100 ಬೆಡ್ ಮಾತ್ರ ಐಸಿಯು ಸೌಲಭ್ಯದೊಂದಿಗೆ ಕೋವಿಡ್​​​​ಗೆ ಮೀಸಲಿಡಲಾಗಿದೆ. ಇಲ್ಲಿ ಐಎಲ್​ಐ ಹಾಗೂ ಸಾರಿ ಕೇಸ್ ನಿಂದ ಬರುವ ರೋಗಿಗಳನ್ನು ಚಿಕಿತ್ಸೆ ಮಾಡಲಾಗ್ತಿದೆ ಎಂದರು.

ನಾನ್​​​ ಕೋವಿಡ್​​​ ರೋಗಿಗಳ ಪರಿಶೀಲನೆ

ಇದಲ್ಲದೆಯೇ ರಾಮಯ್ಯ‌ ಸೇರಿದಂತೆ ಸುತ್ತಮುತ್ತಲೂ ಬೇರೆ ಬೇರೆ ಖಾಸಗಿ‌ ಆಸ್ಪತ್ರೆಗಳು ಇವೆ. ಆದರೆ ಸದ್ಯ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡೇತರ ರೋಗಿಗಳೇ ಹೆಚ್ಚು ಚಿಕಿತ್ಸೆ ಪಡೆಯುತ್ತಿರುವುದರಿಂದ ತಕ್ಷಣವೇ ಸರ್ಕಾರ ಆದೇಶಿಸಿರುವಂತೆ ಶೇ.50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಪರಿಶೀಲಿಸಿ, ಇನ್ನೆಷ್ಟು ಖಾಸಗಿ ಆಸ್ಪತ್ರೆಗಳಿಂದ ಬೆಡ್​ಗಳು ಸಿಗಬೇಕು, ಯಾವ ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ನಾನ್ ಕೋವಿಡ್ ರೋಗಿಗಳಿದ್ದಾರೆ ಎಂಬುದನ್ನು ಪರಿಶೀಲಿಸಲು ತಿಳಿಸಿದ್ದಾರೆ.

ಹೀಗಾಗಿ ಇನ್ನೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ ಬೆಡ್​​ಗಳು ಸಿಗದೇ ಇರುವ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆಗಳ ಮೇಲೆಯೇ ಒತ್ತಡ ಹೆಚ್ಚಿದೆ. ಆದರೆ ಕೆ.ಸಿ ಜನರಲ್ ಸೇರಿದಂತೆ ಅನೇಕ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕೊರತೆ ಹಾಗೂ ಸೌಲಭ್ಯ ಕೊರತೆಯನ್ನು ಸರ್ಕಾರ ಆದಷ್ಟು ಬೇಗ ನಿವಾರಿಸಬೇಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಅಬ್ಬರ.. ಒಂದೇ ಬೀದಿಯ 8 ಮನೆಗಳಲ್ಲಿ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.