ಬೆಂಗಳುರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದ ವೇಳೆ ಗಲಭೆ ಸೃಷ್ಟಿಸಿದವರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಲು ಹಿರಿಯ ವಕೀಲ ಸಿ.ವಿ. ನಾಗೇಶ್ ಅವರನ್ನು ನೇಮಕಗೊಂಡಿದ್ದಾರೆ.
ಇದನ್ನು ಓದಿ: ಬೀದರ್ನ ಶಾಹೀನ್ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ: ಪಿಐಎಲ್ ವಜಾಗೊಳಿಸಿದ ಸುಪ್ರೀಂ
ಪ್ರತಿಭಟನೆ ರಾಜಕೀಯವಾಗಿಯೂ ತಳುಕು ಹಾಕಿಕೊಂಡಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರ ಪರ ಈಗಾಗಲೇ ಹಿರಿಯ ವಕೀಲರು ವಾದ ಮಂಡಿಸುತ್ತಿದ್ದಾರೆ. ಈ ಹಿನ್ನೆಲೆ ಅಭಿಯೋಜನೆಯ ಪರ ವಾದಿಸಲು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಚ್ಚಿನ ಅನುಭವ ಇರುವ ವಕೀಲರ ಅಗತ್ಯವಿತ್ತು. ಹೀಗಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಇದನ್ನು ಓದಿ: ಸ್ಲಂ ಭರತನ ಎನ್ಕೌಂಟರ್ಗೆ ಸೈಲೆಂಟ್ ಆದ ರೌಡಿಗಳು: ಒಂದೇ ದಿನ ಐವರ ಶರಣಾಗತಿ
ವಿಶೇಷ ಅಭಿಯೋಜಕರಾಗಿ ಸಿ.ವಿ.ನಾಗೇಶ್ ವಿಚಾರಣಾ ನ್ಯಾಯಾಲಯಗಳಲ್ಲಿ ವಾದಿಸುವುದಿಲ್ಲ. ಬದಲಿಗೆ ಹೈಕೋರ್ಟ್ನಲ್ಲಿ ಮಾತ್ರ ಅಭಿಯೋಜನೆ ಪರ ವಾದ ಮಂಡಿಸಲಿದ್ದಾರೆ.