ಬೆಂಗಳೂರು: ಅಕ್ರಮವಾಗಿ ಮಾರಾಟ ಮಾಡಲು ತರಿಸಿದ್ದ 23 ಲಕ್ಷ 97 ಸಾವಿರ ರೂ. ಮೌಲ್ಯದ ಸಿಗರೇಟ್ಗಳನ್ನು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಶಾರ್ಜಾದಿಂದ ಬಂದಿದ್ದ 8 ಬಾಕ್ಸ್ಗಳು ಅನುಮಾನಾಸ್ಪದವಾಗಿ ಕಂಡಿದ್ದು, ಏರ್ರ್ಪೋರ್ಟ್ ಅಧಿಕಾರಿಗಳು ತಕ್ಷಣ ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ವೇಳೆ, ಡನ್ಹಿಲ್, ಬೆನ್ಸನ್, ಹೆಡ್ಜಸ್ ಸಿಗರೇಟ್ ಬಾಕ್ಸ್ಗಳು ಕಂಡು ಬಂದಿವೆ. ಇದರಲ್ಲಿದ 23,97,000 ರೂ. ಮೌಲ್ಯದ 1,59,800 ಸಿಗರೇಟ್ ಸ್ಟಿಕ್ಸ್ಗಳನ್ನು ಸೀಜ್ ಮಾಡಲಾಗಿದೆ.
ಸಿಗರೇಟ್ ಬಾಕ್ಸ್ಗಳು ಯಾರ ಹೆಸರಿನಲ್ಲಿ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಏರ್ ಪೋರ್ಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.