ETV Bharat / state

ಬೆಂಗಳೂರಲ್ಲಿ ದೇಶದ್ರೋಹ ಕೇಸ್: ತಮಾಷೆಗಾಗಿ ಸ್ನೇಹಿತರ ಸವಾಲು ಸ್ವೀಕರಿಸಿ ಪಾಕ್ ಬಾವುಟ ಹಾಕಿದ್ವಿ ಎಂದ ಟೆಕ್ಕಿಗಳು

ತಮಾಷೆಗಾಗಿ ಸ್ನೇಹಿತರು ಹಾಕಿದ್ದ ಸವಾಲು ಸ್ವೀಕರಿಸಿದ್ದೇ ದೇಶದ್ರೋಹ ಪ್ರಕರಣದಲ್ಲಿ ಟೆಕ್ಕಿಗಳು ಸಿಲುಕಿಕೊಳ್ಳಲು ಕಾರಣವಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಈ ಸಂಗತಿ ಗೊತ್ತಾಗಿದೆ.

ಬೆಂಗಳೂರಲ್ಲಿ ದೇಶದ್ರೋಹ ಪ್ರಕರಣ
ಬೆಂಗಳೂರಲ್ಲಿ ದೇಶದ್ರೋಹ ಪ್ರಕರಣ
author img

By

Published : Aug 23, 2022, 10:45 AM IST

Updated : Aug 23, 2022, 10:55 AM IST

ಬೆಂಗಳೂರು: ಆಗಸ್ಟ್ 14 ರಂದು‌ ನಡೆದ ದೇಶದ್ರೋಹ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಈ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಮಾಷೆಗಾಗಿ ಸವಾಲು ಹಾಕಿದ್ದರಿಂದ ಪಾಕಿಸ್ತಾನ್ ಬಾವುಟ ಹಾಕಿದ್ದೆವು ಎಂದು ಟೆಕ್ಕಿಗಳು ಬಾಯ್ಬಿಟ್ಟಿದ್ದಾರೆ.

ಕ್ಲಬ್ ಹೌಸ್​​ನಲ್ಲಿ ಪಾಕ್ ಪರ ಘೋಷಣೆ: ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕ್ಲಬ್ ಹೌಸ್​​ನಲ್ಲಿ ಗ್ರೂಪ್​​ಗಳನ್ನು ಮಾಡಿಕೊಂಡು ಪಾಕ್ ಪರವಾಗಿ ಮಾತನಾಡಿದ್ದರು. ಅದೇ ವೇಳೆ ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಲ್ಲದೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಕಿ ಪಾಕ್ ಪರವಾಗಿ ನಡೆದುಕೊಂಡಿದ್ರು. ಅಷ್ಟೇ ಅಲ್ಲದೆ ಆ ಆ್ಯಪ್​​ನಲ್ಲಿದ್ದ ಹತ್ತೂ ಜನರು ಕೂಡ ತಮ್ಮ ಡಿಪಿಗಳಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ರು.

ದೇಶದ್ರೋಹ ಪ್ರಕರಣದಲ್ಲಿ ಟೆಕ್ಕಿಗಳು: ತನಿಖೆ ನಡೆಸಿ ಮೊದಲಿಗೆ ಸೌರಭ್ ಹಾಗೂ ರಾಹುಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಮಾಷೆ ಮಾಡಲು ಹೋಗಿ ಈ ರೀತಿಯ ಘಟನೆ ನಡೆದಿದೆ ಎಂದು ಬಾಯ್ಬಿಟ್ಟಿದ್ದಾರೆ. ಸೌರಭ್ ಹಾಗೂ ರಾಹುಲ್ ಇಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ದರು. ಕ್ಲಬ್ ಹೌಸ್ ಗ್ರೂಪ್​​ನಲ್ಲಿ ಮಾತನಾಡುವ ವೇಳೆ ನಿಮಗೆ ತಾಕತ್ ಇದ್ರೆ ಪಾಕ್ ಪರವಾಗಿ ಘೋಷಣೆ ಮಾಡಿ ಎಂದು ಗ್ರೂಪ್​ನಲ್ಲಿ ಕೆಲವರು ಸವಾಲೆಸೆದಿದ್ದರು. ಆಗ ಸೌರಭ್ ಮತ್ತು ಟೀಂ ನಮ್ಮ ತಾಕತ್ ಬಗ್ಗೆ ಮಾತಾಡ್ತೀರಾ ಎಂದು ಅವರು ಹೇಳಿದ ಹಾಗೆ ಮಾಡಿದ್ದರು.

ಸದ್ಯ ಉಳಿದ ಯುವಕರಿಗಾಗಿ ಪೊಲೀಸರು ಬಲೆ ಬೀಸಿದ್ದು, ಸೌರಭ್ ಹಾಗೂ ರಾಹುಲ್​ನನ್ನ ಪೊಲೀಸರು ವಿಚಾರಣೆ ನಡೆಸಿ ಕಳಿಸಿದ್ದಾರೆ. ಉಳಿದ ಆರೋಪಿಗಳು ಸಿಕ್ಕ ಬಳಿಕ ಮತ್ತೆ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಕ್ಲಬ್​​ಹೌಸ್​ನಲ್ಲಿ ಪಾಕಿಸ್ತಾನ​ ಪರ ಘೋಷಣೆ: ದೇಶದ್ರೋಹಿಗಳ ವಿರುದ್ಧ ತೀವ್ರ ಆಕ್ರೋಶ

Last Updated : Aug 23, 2022, 10:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.