ETV Bharat / state

ಬೆಂಗಳೂರು ನಿಷೇಧಾಜ್ಞೆ: ನಿಯಮ ಉಲ್ಲಂಘಿಸಿದ್ರೆ ಶಿಕ್ಷೆ ಖಚಿತ !

author img

By

Published : Dec 31, 2020, 2:04 PM IST

ಈ ಬಾರಿಯ ಹೊಸ ವರ್ಷಾಚರಣೆ ಮೇಲೆ ರೂಪಾಂತರ ಕೊರೊನಾ ವೈರಸ್​ ಕರಿ ಛಾಯೆ ಬಿದ್ದಿದ್ದು, ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳ ಬಗ್ಗೆ ಮೈಕ್ ಮೂಲಕ ತಿಳಿಸುತ್ತಿದ್ದಾರೆ.

ಹೊಯ್ಸಳ ಸಿಬ್ಬಂದಿಯಿಂದ  ಮೈಕ್ ಮೂಲಕ ಜಾಗೃತಿ
ಹೊಯ್ಸಳ ಸಿಬ್ಬಂದಿಯಿಂದ ಮೈಕ್ ಮೂಲಕ ಜಾಗೃತಿ

ಬೆಂಗಳೂರು: ರೂಪಾಂತರ ಕೊರೊನಾ ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇನ್ನು ಈ ವಿಚಾರದಿಂದಲೇ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ನಗರದೆಲ್ಲೆಡೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ವಿನಾಕಾರಣ ಜನ ಓಡಾಡಿದರೆ ಶಿಕ್ಷೆ ಖಚಿತ ಎಂದು ಪೊಲೀಸರು ಸಾರಿ ಸಾರಿ ಹೇಳುತ್ತಿದ್ದಾರೆ.

ಈಗಾಗಲೇ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ನಿಷೇಧಾಜ್ಞೆ ಇರುವ ಕಾರಣ ಏನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ಸ್ಪೀಕರ್​ ಮೈಕ್​ ಮೂಲಕ ತಿಳಿಸುತ್ತಿದ್ದಾರೆ.

ಹೊಯ್ಸಳ ಸಿಬ್ಬಂದಿಯಿಂದ ಮೈಕ್ ಮೂಲಕ ಜಾಗೃತಿ

ಹೊಯ್ಸಳ ಸಿಬ್ಬಂದಿ ಸಿಗ್ನಲ್​ಗಳ ಬಳಿ, ರಸ್ತೆ ಬದಿ, ಮಾರುಕಟ್ಟೆ ಪ್ರದೇಶದಲ್ಲಿ‌, ಬ್ರಿಗೇಡ್ ರೋಡ್, ಎಂಜಿ ರಸ್ತೆ, ಕೋರಮಂಗಲ, ಮೆಜೆಸ್ಟಿಕ್ ಹೀಗೆ ಅನೇಕ ಪ್ರದೇಶಗಳಲ್ಲಿ ಮೈಕ್​ ಮೂಲಕ ಮಾಹಿತಿ ನೀಡಲಾಗುತ್ತಿದೆ.

ಇನ್ನು ಚರ್ಚ್ ಸ್ಟ್ರೀಟ್ ಸೇರಿದಂತೆ ಪ್ರಮುಖ ರಸ್ತೆ, ಜಂಕ್ಷನ್ ಬಳಿ ಸೆಲೆಬ್ರೇಷನ್ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಬೇಡಿ, ಅನಗತ್ಯವಾಗಿ ಹೊರಬರಬೇಡಿ ಎಂದು ಪೊಲೀಸರು ಹೇಳುತ್ತಿದ್ದಾರೆ. ಒಂದು ವೇಳೆ‌ 5ಕ್ಕಿಂತ ಹೆಚ್ಚು ಜನರು ಗುಂಪು ಸೇರಿದ್ರೆ ಐಪಿಸಿ-188 NDMA ಕಾಯ್ದೆ ಅಡಿ ಕೇಸ್ ಬೀಳುವುದು ಖಚಿತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.