ಬೆಂಗಳೂರು: ಕೊವೀಡ್-19 ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಿ 144 ಸೆಕ್ಷನ್ ಜಾರಿಗೆ ತರಲಾಗಿತ್ತು. ಈಗ ಅದನ್ನು ಮುಂದುವರೆಸಿ ಏಪ್ರಿಲ್ 14ರವರೆಗೆ ವಿಸ್ತರಿಸಲಾಗಿದೆ.
ನಗರದಲ್ಲಿ ಕೊರೊನಾ ತಡೆಗಟ್ಟಲು ಯಾರೂ ಗುಂಪು ಸೇರದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಲಾಕ್ಡೌನ್ ಹೇರಿ 144 ಸೆಕ್ಷನ್ ಜಾರಿಗೆ ಆದೇಶ ಹೊರಡಿಸಿದ್ದರು. ಸದ್ಯ ಇಂದು ಮತ್ತೆ ಆದೇಶ ಹೊರಡಿಸಿ ಇಂದಿನಿಂದ ಏಪ್ರಿಲ್ 14ರವರೆಗೆ 144 ಸೆಕ್ಷನ್ ಸಿಲಿಕಾನ್ ಸಿಟಿಯಲ್ಲಿ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಯಾರೂ ಗುಂಪು ಸೇರುವುದು, ವಿನಾ ಕಾರಣ ಅಡ್ಡಾದಿಡ್ಡಿ ಓಡಾಟ ಮಾಡೋದಕ್ಕೆ ಕಡಿವಾಣ ಬೀಳಲಿದೆ. ಏನೆಲ್ಲಾ ವಿನಾಯಿತಿ ಇದೆ.