ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಸಲು ಶೇ50ರಷ್ಟು ರಿಯಾಯಿತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಎರಡನೇ ದಿನವೂ ಕೋಟಿ ಕೋಟಿ ರೂ ದಂಡ ಪಾವತಿಯಾಗಿದೆ. ಇಂದು 2 ಲಕ್ಷದ 52 ಸಾವಿರ 520 ಪ್ರಕರಣಗಳಿಂದ ಒಟ್ಟು 6.80 ಕೋಟಿ ದಂಡ ಸಂಗ್ರಹವಾಗಿದೆ. ಪೊಲೀಸ್ ಸಿಬ್ಬಂದಿಗಳ ಮೂಲಕ 1 ಲಕ್ಷದ 14 ಸಾವಿರ 685 ಪ್ರಕರಣಗಳ 2.75 ಕೋಟಿ, ಪೇಟಿಎಂ ಮೂಲಕ 1 ಲಕ್ಷದ 06 ಸಾವಿರದ 980 ಪ್ರಕರಣಗಳ 3.27 ಕೋಟಿ, ಬೆಂಗಳೂರು ಓನ್ ಸೆಂಟರಿನಲ್ಲಿ 30 ಸಾವಿರದ 131 ಪ್ರಕರಣಗಳ 78.58 ಲಕ್ಷ ಹಾಗೂ ಸಂಚಾರಿ ಆಯುಕ್ತರ ಕಚೇರಿಯಲ್ಲಿ 724 ಪ್ರಕರಣಗಳ 18 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆ. ಒಟ್ಟಾರೆ ಈ ಎರಡು ದಿನಗಳಲ್ಲಿ 4.77 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದ 13.81 ಕೋಟಿ ದಂಡ ಪಾವತಿಯಾಗಿದ್ದು ನಾಳೆಯೂ ಏರಿಕೆಯಾಗುವ ಸಾಧ್ಯತೆಯಿದೆ.
ಶುಕ್ರವಾರದಂದು 201828 ಪ್ರಕರಣಗಳ ಒಟ್ಟು 5ಕೋಟಿ 61ಲಕ್ಷದ 45 ಸಾವಿರ ರೂಪಾಯಿ ದಂಡ ಪಾವತಿ: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದವರು ಫೆ.11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸುತ್ತಿದ್ದಂತೆ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ನಿನ್ನೆ ದಿನ ಬೆಂಗಳೂರಿನಲ್ಲಿ 1 ಕೋಟಿ 42 ಲಕ್ಷದ 859 ಸಾವಿರ ಕ್ಕೂ ಅಧಿಕ ಪ್ರಕರಣಗಳ ಪೈಕಿ 201828 ಪ್ರಕರಣಗಳ ಒಟ್ಟು 5ಕೋಟಿ 61ಲಕ್ಷದ 45 ಸಾವಿರ ರೂಪಾಯಿ ದಂಡ ಪಾವತಿಯಾಗಿತ್ತು.
ಪೊಲೀಸ್ ಠಾಣೆಗಳಲ್ಲಿ 2 ಕೋಟಿ 17 ಲಕ್ಷ 24 ಸಾವಿರದ 950 ರೂಪಾಯಿ ದಂಡ ಪಾವತಿಯಾಗಿದ್ದು, ಸಂಚಾರಿ ಆಯುಕ್ತರ ಕಚೇರಿಯಲ್ಲಿ 89,650 ಬೆಂಗಳೂರು ಒನ್ ಸೆಂಟರಿನಲ್ಲಿ 16,21,600 ಪಾವತಿಯಾಗಿದ್ದು, ಪೇಟಿಎಂ ಮೂಲಕ 3 ಕೋಟಿ 23 ಲಕ್ಷ 68 ಸಾವಿರದ 900 ರೂ ದಂಡ ಪಾವತಿಯಾಗಿದ್ದವು.
ಇದನ್ನೂ ಓದಿ: ಸವಾರರಿಗೆ ಸರ್ಕಾರದ ಆಫರ್: ಗಾಡಿ ಮೇಲೆ ಟ್ರಾಫಿಕ್ ಫೈನ್ ಇದೆಯಾ? ದಂಡ ಕಟ್ಟಿ ಶೇ.50 ರಿಯಾಯಿತಿ ಪಡೆಯಿರಿ
ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಸರ್ಕಾರ ಆದೇಶ ಹೊರಡಿಸಿತ್ತು. ಬೆಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯವ್ಯಾಪಿ ಫೆ.11ರೊಳಗೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಸಿದರೆ ಶೇ 50ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆ ಎರಡು ದಿನಗಳಲ್ಲಿ ಜನರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡವನ್ನು ಪಾವತಿಸಲು ಠಾಣೆಗಳಿಗೆ ಆಗಮಿಸಿ ಬಾಕಿ ದಂಡವನ್ನು ಪಾವತಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ವಾಹನಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ಡಿಸ್ಕೌಂಟ್: ಒಂದೇ ದಿನ ಸಂಗ್ರಹವಾದ ಮೊತ್ತ ಎಷ್ಟು ಗೊತ್ತೇ?