ಬೆಂಗಳೂರು: ಲಾಕ್ಡೌನ್ ಜಾರಿ ಹಿನ್ನೆಲೆ ನಗರ ಪೊಲೀಸರು ಪ್ರಕಟಣೆ ಬಿಡುಗಡೆ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗೆ ಕಾರ್ಯಾಚರಣೆ ನಡೆಸಿ 720 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಚಿಕಿತ್ಸೆಗೆ ತೆರಳಿದ್ದ ಯುವಕ ಬೈಕ್ ಸೀಜ್: ಪತ್ರಕರ್ತರ ನೆರವಿನಿಂದ ಸಮಸ್ಯೆ ಪರಿಹಾರ
642 ದ್ವಿಚಕ್ರ ವಾಹನ, 44 ಮೂರು ಚಕ್ರದ ವಾಹನ, 34 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದ್ದು, ಒಟ್ಟು 11 ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ಕೇಸ್ ಬುಕ್ ಮಾಡಿ ಎನ್ ಡಿಎಂಎ ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.