ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಇತ್ತ ಇನ್ನೊಬ್ಬ ಪ್ರಮುಖ ಆರೋಪಿ ಕಾರ್ಪೊರೇಟರ್ ಜಾಕಿರ್ ಹುಸೇನ್ ಸಂಪತ್ ರಾಜ್ ಬಂಧನವಾಗುತ್ತದೆ ಎನ್ನುವ ಕಾರಣಕ್ಕೆ ತಲೆಮರೆಸಿಕೊಂಡಿದ್ದಾನೆ. ಈ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಸಿಸಿಬಿ ತಲಾಷ್ ನಡೆಸಿದೆ.
ಈ ಘಟನೆಯಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾಗಿತ್ತು. ಸದ್ಯ ಸಿಸಿಬಿಯ ವಿಶೇಷ ಟೆಕ್ನಿಕಲ್ ಟೀಂ ಜಾಕೀರ್ ಹುಸೇನ್ ಕುಟುಂಬಸ್ಥರು, ಸ್ನೇಹಿತರ ಕಾಲ್ ರೆಕಾರ್ಡ್, ವಾಟ್ಸ್ಆ್ಯಪ್ ಬಗ್ಗೆ ನಿಗಾವಹಿಸಿದ್ದಾರೆ. ಮತ್ತೊಂದೆಡೆ ಸಂಪತ್ ರಾಜ್ ಬಗ್ಗೆ ನಿಗಾ ಇಟ್ಟರೂ ಕೂಡ ಸಂಪತ್ ರಾಜ್ ಇಲ್ಲಿಯವರೆಗೆ ಕುಟುಂಬಸ್ಥರ ಸಂಪರ್ಕಕ್ಕೆ ಬಂದಿಲ್ಲ ಎನ್ನಲಾಗಿದೆ. ಇವರ ಪತ್ತೆಗಾಗಿ ಸಿಸಿಬಿ ವಿಶೇಷ ತಂಡ ಬೇರೆ ಬೆರೆ ಕಡೆ ತೆರಳಿ ಶೋಧದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದರೂ ಜಾಕಿರ್ ಹುಸೇನ್ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆ ಪ್ರಾಮುಖ್ಯತೆ ಪಡೆದಿದೆ.