ETV Bharat / state

ಎಸ್​​ಸಿಎಸ್​​ಪಿ/ಟಿಎಸ್​​ಪಿ ಯೋಜನೆ ಅನುದಾನ ಎಲ್ಲೂ ಡೈವರ್ಟ್ ಮಾಡಿಲ್ಲ: ಸಿಎಂ ಸ್ಪಷ್ಟನೆ - ಎಸ್​​​ಸಿಎಸ್​​ಪಿ/ ಟಿಎಸ್​​ಪಿ ಯೋಜನೆ ಅನುದಾನ ವಿಚಾರ

ಇಂದು ಸಿಎಂ ಬಿ.ಎಸ್​.ಯಡಿಯೂರಪ್ಪನವರು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಎಸ್​​​ಸಿಎಸ್​​ಪಿ/ ಟಿಎಸ್​​ಪಿ ಯೋಜನೆಯ ಅನುದಾನದ ಕುರಿತಾದ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು.

ಸಿಎಂ ಯಡಿಯೂರಪ್ಪ
CM Yadiyurappa
author img

By

Published : Jul 2, 2021, 3:37 PM IST

ಬೆಂಗಳೂರು: ಎಸ್​​​ಸಿಎಸ್​​ಪಿ/ ಟಿಎಸ್​​ಪಿ ಯೋಜನೆಯ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅನುದಾನವನ್ನು ಬೇರೆಡೆ ಬಳಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

ಬೇರೆ ಯಾವುದೇ ಕಡೆ ಅನುದಾನವನ್ನು ಬಳಕೆ ಮಾಡಿಲ್ಲ. ಈ ಯೋಜನೆಯ ಅನುದಾನವನ್ನು ಸಮುದಾಯದ ಏಳಿಗೆಗೋಸ್ಕರ ಮಾತ್ರ ಸದ್ಬಳಕೆ ಮಾಡಿದ್ದೇವೆ. ಈ ಬಗ್ಗೆ ಯಾವುದೇ ತಪ್ಪು ಕಲ್ಪಬೆ ಬೇಡ ಎಂದು ಸ್ಪಷ್ಟಪಡಿಸಿದರು.

ಸಿಎಂ ಸ್ಪಷ್ಟನೆ

2020-21 ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,131.12 ಕೋಟಿ ರೂ. ಒದಗಿಸಿದ್ದು, 17,352.45 ಕೋಟಿ ರೂ. ವೆಚ್ಚವಾಗಿದೆ. ಒಟ್ಟು 96% ಪ್ರಗತಿ ಸಾಧಿಸಲಾಗಿದೆ. ಇತ್ತ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7814.78 ಕೋಟಿ ಒದಗಿಸಿದ್ದು, 7294.54 ಕೋಟಿ ರೂ. ವೆಚ್ಚವಾಗಿದೆ. ಒಟ್ಟು 93% ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

36 ಅಭಿವೃದ್ಧಿ ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳಿಗೆ ಎಸ್​​ಸಿಎಸ್​​ಪಿ/ಟಿಎಸ್​​ಪಿ ಅಡಿಯಲ್ಲಿ ಒಟ್ಟು 25,945.90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24,646.99 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಆ ಮೂಲಕ 95% ಪ್ರಗತಿ ಸಾಧಿಸಲಾಗಿದೆ ಎಂದರು.

ಲೋಪವಾದರೆ ಕಠಿಣ ಕ್ರಮ:

ಈ ಯೋಜನೆಯಡಿಯ ಅನುದಾಮವನ್ನು ಸದ್ಬಳಕೆ ಮಾಡಲು ಸೂಚಿಸಲಾಗಿದೆ. ಸಂಪೂರ್ಣ ಅನುದಾನವನ್ನು ವಿನಿಯೋಗ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಯೋಜನೆಯಲ್ಲಿ ಲೋಪಗಳಾಗದಂತೆ ಸೂಚನೆ ನೀಡಿದ್ದೇವೆ. ಲೋಪವಾದರೆ ಕಾಯ್ದೆಯನ್ವಯ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ ಎಂದರು.

ಯಾವುದೇ ಅನುದಾನ ಡೈವರ್ಷನ್ ಆಗಿಲ್ಲ:

ಈ ಯೋಜನೆಯಡಿಯ ಅನುದಾನವನ್ನು ಯಾವುದೇ ಅನ್ಯ ಉದ್ದೇಶಕ್ಕೆ ಡೈವರ್ಶನ್ ಮಾಡಿಲ್ಲ ಎಂದು ಇದೇ ವೇಳೆ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಕಳೆದ ವರ್ಷ ಎಸ್​ಸಿಎಸ್​​​ಪಿ ಟಿಎಸ್​ಪಿಯ ಶೇ.95 ರಷ್ಟು ಅನುದಾನ ಬಳಕೆ ಮಾಡಿದ್ದೇವೆ. 36 ಇಲಾಖೆಗಳಲ್ಲೂ ನಿಗದಿತ ಕಾರ್ಯಕ್ರಮಗಳನ್ನೇ ಮಾಡಲಾಗಿದೆ ಎಂದರು.

ಕೋವಿಡ್ ಸಂದರ್ಭ ಸಮುದಾಯದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ 50,000 ರೂ. ನೇರ ಸಾಲ ಕೊಟ್ಟಿದ್ದೇವೆ. ಈವರೆಗೆ ಒಟ್ಟು 810 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಬ್ಯಾಂಕ್​​ನವರು ಸಾಲ ಕೊಡುವುದಿಲ್ಲ ಎಂಬ ಕಾರಣಕ್ಕೆ ಪ.ಜಾತಿ ಹಾಗೂ ಪಂಗಡದ ವ್ಯಾಪಾರಿಗಳ 1,51,000 ಕುಟುಂಬಕ್ಕೆ ಸಾಲ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.