ಬೆಂಗಳೂರು: ನಗರದ ಜವಹರಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಿಸುತ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಗ್ರಹಣವನ್ನು ಕುತೂಹಲದಿಂದ ನೋಡುತ್ತಿದ್ದಾರೆ.
ವೆಲ್ಡರ್ಸ್ ಗ್ಲಾಸ್, ಟೆಲಿಸ್ಕೋಪ್ನ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಸೂರ್ಯಗ್ರಹಣ ಬೆಳಗ್ಗೆ 8.04 ನಿಮಿಷಕ್ಕೆ ಆರಂಭವಾಗಿ, 9.29 ಕ್ಕೆ ಸಂಪೂರ್ಣ ಗ್ರಹಣ ಗೋಚರವಾಗಿ, 11:11 ಕ್ಕೆ ಗ್ರಹಣ ಮುಗಿಯಲಿದೆ. ಸಂಪೂರ್ಣ ಕಂಕಣ ಗ್ರಹಣ 2 ರಿಂದ 2:20 ನಿಮಿಷದವರೆಗೆ ಗೋಚರಿಸಲಿದೆ. ಈ ಬಾರಿ ಭೂಮಿ ಹಾಗೂ ಚಂದ್ರನ ನಡುವೆ ಅಂತರ ಹೆಚ್ಚಿಗೆ ಇರುವುದರಿಂದ ಸೂರ್ಯನನ್ನ ಚಂದ್ರ ಸಂಪೂರ್ಣವಾಗಿ ಮುಚ್ಚುಲು ಸಾಧ್ಯವಿಲ್ಲ ಎನ್ನಲಾಗ್ತಿದೆ.
ಚಂದ್ರ ಅಡ್ಡ ಬಂದರೂ ಸಹ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬಳೆಯ ಆಕಾರದಲ್ಲಿ ಸೂರ್ಯ ಗೋಚರ ಆಗಲಿದ್ದಾನೆ. 9 ವರ್ಷಗಳ ಬಳಿಕ ಸಂಭವಿಸುತ್ತಿರೋ ಕಂಕಣ ಸೂರ್ಯ ಗ್ರಹಣ ಇದಾಗಿದ್ದು, ಇದನ್ನು ವಿಜ್ಞಾನಿಗಳು ಹಾಗೂ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ತಾರಾಲಯದಲ್ಲಿ ಸಾರ್ವಜನಿಕರಿಗಾಗಿ 5 ಟೆಲಿಸ್ಕೋಪ್ ವ್ಯವಸ್ಥೆ ಕಲ್ಪಿಸಲಾಗಿದೆ.