ಬೆಂಗಳೂರು: ಶಾಲೆಗಳನ್ನ ಪುನರಾರಂಭ ಮಾಡುವ ವಿಚಾರವಾಗಿ ಪೋಷಕರಿಂದ ಅಭಿಪ್ರಾಯ ಸಂಗ್ರಹ ಮುಕ್ತಾಯವಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ ನೀಡಿದ್ದರು. ಜೂ. 1 ರಿಂದ 20ರ ವರೆಗೆ ಶಾಲೆಯ ಎಸ್ಡಿಎಂಸಿ ಸದಸ್ಯರು,ಪೋಷಕರು ಹಾಗೂ ವಿದ್ಯಾರ್ಥಿಗಳ ಬಳಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೂರು ಪ್ರಶ್ನೆಗಳನ್ನ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು.
- ಕೊರೊನಾ ನಡುವೆ ಶಾಲೆಗಳನ್ನ ಪ್ರಾರಂಭಿಸುವುದು ಸೂಕ್ತವೇ?
- ಶಾಲೆಗಳನ್ನ ಪ್ರಾರಂಭಿಸಿದರೂ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆಗಳೇನು?
- ತರಗತಿಗಳನ್ನ ಶಿಫ್ಟ್ ಆಧಾರದಲ್ಲಿ ನಡೆಸಲು ಪೋಷಕರಿಂದ ಸಲಹೆ?
ಹೀಗೆ.. ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿಂದ ವರದಿ ಕೇಳಲಾಗಿತ್ತು. ಜೂ. 20ರೊಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ಕೊಡಲಾಗಿತ್ತು. ಇದೀಗ ಶಾಲೆಗಳು ಆನ್ ಲೈನ್ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈಗಾಗಲೇ ಬಹುತೇಕ ಶಾಲೆಗಳ ವರದಿಯನ್ನು ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಅಂತಿಮವಾಗಿ ಸರ್ಕಾರಕ್ಕೆ ಪೋಷಕರು ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಸದ್ಯಸರಿಂದ ಅಭಿಪ್ರಾಯ ಸಂಗ್ರಹ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ.