ETV Bharat / state

‌ಪ್ರಾಥಮಿಕ ತರಗತಿಗೆ ಮೊದಲ ದಿನ ಬಂದವರೆಷ್ಟು? ಹೀಗಿದೆ ಹಾಜರಾತಿ - 1-5 ನೇ ತರಗತಿ ಆರಂಭ

ಕಳೆದ ಆಗಸ್ಟ್ 23ರಂದು ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದವು. ಬಳಿಕ 2ನೇ ಹಂತವಾಗಿ ಪ್ರಾಥಮಿಕ ತರಗತಿಯಾದ 6, 7 ಹಾಗೂ 8ನೇ ಭೌತಿಕ ತರಗತಿ ಆರಂಭವಾಗಿತ್ತು. ಇದೀಗ 1-5ನೇ ತರಗತಿ ಶುರುವಾಗಿದ್ದು, ಆನ್​ಲೈನ್​ ಹಾಗೂ ಆಫ್​ಲೈನ್​​ ಎರಡಕ್ಕೂ ಅವಕಾಶ ನೀಡಲಾಗಿದೆ.

school-re-opened-in-karnataka
‌ಪ್ರಾಥಮಿಕ ತರಗತಿ
author img

By

Published : Oct 25, 2021, 8:24 PM IST

ಬೆಂಗಳೂರು: ಕೊರೊನಾ ತೀವ್ರತೆ ಕಡಿಮೆ ಆದ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಟ್ಟಿರುವ ಸರ್ಕಾರ ಇಂದಿನಿಂದ ಪ್ರಾಥಮಿಕ ತರಗತಿಯನ್ನ ಆರಂಭಿಸಿದೆ. ಈ ಹಿಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಭೌತಿಕವಾಗಿ 6-10 ನೇ ತರಗತಿ ಪ್ರಾರಂಭಿಸಲಾಗಿತ್ತು. ಇದೀಗ 1-5 ನೇ ತರಗತಿ ಆರಂಭಿಸಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ವಿದ್ಯಾರ್ಥಿಗಳು ಶಾಲಾ ಬಾಗಿಲು ತಟ್ಟಿದ್ದಾರೆ.

ಕಳೆದ ಆಗಸ್ಟ್ 23ರಂದು ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದವು. ಬಳಿಕ 2ನೇ ಹಂತವಾಗಿ ಪ್ರಾಥಮಿಕ ತರಗತಿಯಾದ 6, 7 ಹಾಗೂ 8ನೇ ಭೌತಿಕ ತರಗತಿ ಆರಂಭವಾಗಿತ್ತು. ಇದೀಗ 1-5ನೇ ತರಗತಿ ಶುರುವಾಗಿದ್ದು, ಆನ್​ಲೈನ್​ ಹಾಗೂ ಆಫ್​ಲೈನ್​​ ಎರಡಕ್ಕೂ ಅವಕಾಶ ನೀಡಲಾಗಿದೆ. ಕೊರೊನಾ‌ ಹಿನ್ನೆಲೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ. 50 ರಷ್ಟು ಹಾಜರಾತಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ 1-5ನೇ ತರಗತಿಯ 62,032 ಶಾಲೆಗಳ ಪೈಕಿ 24,761 ಶಾಲೆಗಳು ಸ್ಯಾಟ್ಸ್​ನಲ್ಲಿ ದಾಖಲು ಮಾಡಿರುವ ಅಂಕಿ - ಅಂಶಗಳ ಪ್ರಕಾರ, ಶೇ.39.92 ರಷ್ಟು ಮಕ್ಕಳು ಭೌತಿಕ ತರಗತಿಗೆ ಹಾಜರಾಗಿದ್ದಾರೆ.‌

ತರಗತಿ ಒಟ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಶೇಕಡಾವಾರು
1 10,24,849 2,80,713 (27.39)%
2 10,15,870 2,50,819 (24.69) %
3 10,56,554 2,49,123 (23.58)%
4 10, 88,330 2,62,563 (24.13)%
5 10,43,358 2,49,871 (23.95)%
6 10,61,872 4,95,683 (46.68%)
7 10,61,423 4,81,974 (55.34%)
8 10,43,105 5,15,640 (49.43%)
9 10,00,005 5,17,457 (51.75%)
10 9,83,087 5,16,288 (52.52%)

ಓದಿ: ಬಿಬಿಎಂಪಿ ಜಾಹೀರಾತು ನಿಯಮ ಹಿಂಪಡೆದ ಸರ್ಕಾರ: ತಕರಾರು ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.