ಬೆಂಗಳೂರು : ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ಗುರುವಾರ ಕೊಲಿಜಿಯಂ ಸಭೆ ನಡೆಯಿತು. ಈ ಸಂದರ್ಭದಲ್ಲಿ ಲಲಿತಾ ಕನ್ನೆಗಂಟಿ ಅವರೂ ಸೇರಿ ಒಟ್ಟು 7 ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ.
ವರ್ಗಾವಣೆಗೆ ಶಿಫಾರಸುಗೊಂಡ ನ್ಯಾಯಮೂರ್ತಿಗಳು:
- ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ತೆಲಂಗಾಣ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ
- ನ್ಯಾಯಮೂರ್ತಿ ವಿ. ಎಂ. ವೇಲುಮಣಿ ಮದ್ರಾಸ್ ಹೈಕೋರ್ಟ್‌ನಿಂದ ಕಲ್ಕತ್ತಾ ಹೈಕೋರ್ಟ್
- ನ್ಯಾಯಮೂರ್ತಿ ಬಟ್ಟು ದೇವಾನಂದ್ ಆಂಧ್ರ ಪ್ರದೇಶ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್
- ನ್ಯಾಯಮೂರ್ತಿ ಡಿ. ರಮೇಶ್ ಆಂಧ್ರ ಪ್ರದೇಶದಿಂದ ಅಲಹಾಬಾದ್ ಹೈಕೋರ್ಟ್
- ನ್ಯಾಯಮೂರ್ತಿ ಡಿ. ನಾಗಾರ್ಜುನ್ ತೆಲಂಗಾಣ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್
- ನ್ಯಾಯಮೂರ್ತಿ ಟಿ. ರಾಜಾ ಮದ್ರಾಸ್ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್
- ನ್ಯಾಯಮೂರ್ತಿ ಎ. ಅಭಿಷೇಕ್ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಿಂದ ಪಾಟ್ನಾ ಹೈಕೋರ್ಟ್
ಇದನ್ನೂ ಓದಿ: ನ್ಯಾಯಾಧೀಶರು ಕಾರ್ಯ ಒತ್ತಡ ಅನುಭವಿಸುತ್ತಿದ್ಧಾರೆ: ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್