ETV Bharat / state

ಬೆಂಗಳೂರು: ಓದಿದ್ದು ಇಂಜಿನಿಯರಿಂಗ್ ಆದರೂ ಮಾಡಿದ್ದ ಸಾಲ ತೀರಿಸಲು ಇಳಿದಿದ್ದು ಬ್ಯಾಂಕ್ ರಾಬರಿಗೆ.. - ಬೆಂಗಳೂರಿನಲ್ಲಿ ಬಾಂಕ್​​ ರಾಬರಿ ಮಾಡಿದ್ದ ಆರೋಪಿ ಬಂಧನ

ಬ್ಯಾಂಕ್​​ಗಳಲ್ಲಿ ಲೋನ್ ಪಡೆದು ಯುಎಸ್‌ಎ ಮೂಲದ ಒಎಲ್‌ವೈಎಮ್‌ಪಿ ಎಂಬ ಆನ್‌ಲೈನ್ ಟ್ರೇಡಿಂಗ್​​ನಲ್ಲಿ‌ ಹೂಡಿಕೆ ಮಾಡಿದ್ದ. ಮೂವತೈದು ಲಕ್ಷ ಹಣ ಸಾಲ ಮಾಡಿ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದ. ಈ ಕಾರಣಕ್ಕೆ ಗೂಗಲ್​​​ನಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಒಬ್ಬನೇ ಬ್ಯಾಂಕ್ ರಾಬರಿ ಮಾಡುವುದನ್ನು ಸರ್ಚ್ ಮಾಡಿದ್ದ..

ಬಾಂಕ್​​ ರಾಬರಿ ಮಾಡಿದ್ದ ಇಂಜಿನಿಯರ್​ ಬಂಧನ
ಬಾಂಕ್​​ ರಾಬರಿ ಮಾಡಿದ್ದ ಇಂಜಿನಿಯರ್​ ಬಂಧನ
author img

By

Published : Jan 22, 2022, 3:47 PM IST

Updated : Jan 22, 2022, 3:59 PM IST

ಬೆಂಗಳೂರು : ಸಂಕ್ರಾಂತಿ ಹಬ್ಬದ ದಿನ ಎಲ್ಲರೂ ಎಳ್ಳು ಬೆಲ್ಲ ಸವಿಯುತ್ತಿದ್ದರೆ, ನಗರದಲ್ಲಿ ದೊಡ್ಡ ಮಟ್ಟದಲ್ಲಿ ಬ್ಯಾಂಕ್ ರಾಬರಿ ಮಾಡುವುದಕ್ಕೆ ಭರ್ಜರಿ ಪ್ಲಾನ್ ಹಾಕಿ ಅದರಲ್ಲಿ ಸಕ್ಸಸ್ ಕೂಡ ಆಗಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಸಂಬಂಧ ಮಡಿವಾಳ ಠಾಣಾ ಪೊಲೀಸರು ಧೀರಜ್ ಎಂಬಾತನನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಅವರು, ಕಳೆದ ವಾರ ಮಡಿವಾಳ ಠಾಣಾ ವ್ಯಾಪ್ತಿಯ ಎಸ್​​ಬಿಐ ಬ್ಯಾಂಕ್ ರಾಬರಿ ಮಾಡಲು ಸಂಜೆಯ ವೇಳೆಗೆ ಬ್ಯಾಂಕ್​​ಗೆ ಆರೋಪಿ ಒಬ್ಬನೇ ಚಾಕು ಹಿಡಿದು ಬಂದಿದ್ದ.

ಆರೋಪಿ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ಬ್ಯಾಂಕ್ ತಿಜೋರಿಯಲ್ಲಿದ್ದ ₹85 ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ತುಂಬಿಕೊಂಡು ಎಸ್ಕೇಪ್ ಆಗಿದ್ದ ಎಂದು ಮಾಹಿತಿ ನೀಡಿದರು.

ಬಾಂಕ್​​ ರಾಬರಿ ಮಾಡಿದ್ದ ಇಂಜಿನಿಯರ್​ ಬಂಧನ..

ಬ್ಯಾಂಕ್ ರಾಬರಿ ಆಗಿದ್ದ ಸ್ಫಾಟ್ ವಿಸಿಟ್ ಮಾಡಿ ಪೊಲೀಸ್ ಸಿಬ್ಬಂದಿ ಪರಿಶೀಲಿಸಿದ್ದರು. ಆರೋಪಿ ಚಾಕು ತೋರಿಸಿ ನಗ-ನಾಣ್ಯ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು. ಇನ್ವೆಸ್ಟಿಗೇಷನ್ ಶುರು ಮಾಡಿದ್ದ ಎಸಿಪಿ ಸುಧೀರ್ ಹೆಗ್ಡೆ ಮತ್ತು ತಂಡ ಘಟನೆ ನಡೆದ ಒಂದು ವಾರಕ್ಕೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಧೀರಜ್ 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆನ್‌ಲೈನ್ ಆ್ಯಪ್​​ಗಳ ಮೂಲಕ ಲೋನ್ ಪಡೆದಿದ್ದ. ಟ್ರೇಡಿಂಗ್ ಬ್ಯುಸಿನೆಸ್​​ಗೆ ಬಿದ್ದು ಜೀವನ ಹಾಳು ಮಾಡಿಕೊಂಡಿದ್ದ. ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರಿಂದ ಕ್ವಿಕ್ ಆಗಿ ಹಣ ಮಾಡುವ ಆಸೆಗೆ ಬಿದ್ದು ಬ್ಯಾಂಕ್‌ನಿಂದ ಹಣ ಎಗರಿಸಲು ಸ್ಕೆಚ್ ಹಾಕಿದ್ದ ಎಂದು ಮಾಹಿತಿ ನೀಡಿದರು.

ಬ್ಯಾಂಕ್​​ಗಳಲ್ಲಿ ಲೋನ್ ಪಡೆದು ಯುಎಸ್‌ಎ ಮೂಲದ ಒಎಲ್‌ವೈಎಮ್‌ಪಿ ಎಂಬ ಆನ್‌ಲೈನ್ ಟ್ರೇಡಿಂಗ್​​ನಲ್ಲಿ‌ ಹೂಡಿಕೆ ಮಾಡಿದ್ದ. ಮೂವತೈದು ಲಕ್ಷ ಹಣ ಸಾಲ ಮಾಡಿ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದ. ಈ ಕಾರಣಕ್ಕೆ ಗೂಗಲ್​​​ನಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಒಬ್ಬನೇ ಬ್ಯಾಂಕ್ ರಾಬರಿ ಮಾಡುವುದನ್ನು ಸರ್ಚ್ ಮಾಡಿದ್ದ.

ಇಡೀ ನಗರದಲ್ಲಿ ಸೆಕ್ಯೂರಿಟಿ ಇಲ್ಲದ ಬ್ಯಾಂಕ್​​​ಗಳನ್ನು ಸರ್ಚ್ ಮಾಡಿದ್ದ. ಬಳಿಕ ಬಿಟಿಎಂ ಲೇಔಟ್​​ನಲ್ಲಿ ಬ್ಯಾಂಕಿಗೆ ಸೆಕ್ಯೂರಿಟಿ ಇಲ್ಲದ್ದನ್ನು ಗಮನಿಸಿ ಸಂಕ್ರಾಂತಿ ದಿನ ಹೊಂಚು ಹಾಕಿದ್ದ ಎಂದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೃತ್ಯದ ನಂತರ ಪೊಲೀಸರ ದಾರಿ ತಪ್ಪಿಸಲು ಐದಾರು ಕಿಲೋ ಮೀಟರ್ ಬ್ಯಾಂಕ್ ಸಮೀಪವೇ ಸುತ್ತಾಡಿದ್ದ ಧೀರಜ್, ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿ ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ ಅನಂತಪುರಂ ಸುತ್ತಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ. ಸಾಲಗಾರರೆಲ್ಲರಿಗೂ ಹಣ ಹಿಂತಿರುಗಿಸಿದ್ದ, ಕೊನೆಯದಾಗಿ ಒಬ್ಬರಿಗೆ ಸಾಲ ಹಿಂದಿರುಗಿಸಲು ಬಂದಾಗ ಬಲೆಗೆ ಬಿದ್ದಿದ್ದಾನೆ. ಕಾಮಾಕ್ಷಿಪಾಳ್ಯದ ನಿವಾಸಿ ಧೀರಜ್, ಇಂಜಿನಿಯರಿಂಗ್ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಶ್ರೀನಾಥ್ ಮಹದೇವ್ ಜೋಷಿ ತಿಳಿಸಿದರು.

Last Updated : Jan 22, 2022, 3:59 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.