ETV Bharat / state

ಎಸ್​ಬಿಐನಲ್ಲಿ ಸರ್ಕಲ್​ ಬೇಸ್ಡ್​​ ಆಫೀಸರ್ ನೇಮಕಾತಿ: 5,447 ಹುದ್ದೆಗಳಿಗೆ ಅರ್ಜಿ ಆಹ್ವಾನ - ಕನ್ನಡದಲ್ಲಿ ಉದ್ಯೋಗ ಮಾಹಿತಿ

SBI Recruitment: ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

SBI Notification for 5447 circle based officer post

author img

By ETV Bharat Karnataka Team

Published : Nov 24, 2023, 2:24 PM IST

ಬೆಂಗಳೂರು: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ (ಎಸ್​​ಬಿಐ) ಖಾಲಿ ಇರುವ ಒಟ್ಟು 5,447 ಸರ್ಕಲ್​ ಬೇಸ್ಡ್​​ ಆಫೀಸರ್​​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಭಾರತದಾದ್ಯಂತ ಈ ನೇಮಕಾತಿ ನಡೆಯಲಿದ್ದು, ಕರ್ನಾಟಕಕ್ಕೆ ಒಟ್ಟು 387 ಸ್ಥಾನಗಳನ್ನು ಮೀಸಲಾಗಿರಿಸಲಾಗಿದೆ. ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.

ವೇತನ: ಮಾಸಿಕ 36000- 63840 ರೂ.

ವಯೋಮಿತಿ: ಕನಿಷ್ಟ 21 ವರ್ಷ ಮತ್ತು ಗರಿಷ್ಠ 30 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 750 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಅರ್ಜಿ ಶುಲ್ಕ ಕೂಡ ಆನ್​ಲೈನ್​ ಮೂಲಕ ಪಾವತಿಸಬೇಕಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ವಿವರವಾಗಿ ಅಧಿಸೂಚನೆ ಪರಿಶೀಲಿಸಿ ಮುಂದುವರೆಯಬೇಕು.

ಆಯ್ಕೆ ಪ್ರಕ್ರಿಯೆ: ಆನ್​ಲೈನ್​ ಪರೀಕ್ಷೆ, ಸ್ಕ್ರೀನಿಂಗ್​​ ಸಂದರ್ಶನದ ಮೂಲಕ ಆಯ್ಕೆ.

ನವೆಂಬರ್​ 22 ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಡಿಸೆಂಬರ್​ 12 ಆಗಿದೆ. ಜನವರಿ 2024ರಲ್ಲಿ ಆನ್​ಲೈನ್​ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಇನ್ನಿತರ ವಿವರಗಳಿಗೆ ಅಭ್ಯರ್ಥಿಗಳು sbi.co.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಜೂನಿಯರ್​ ಅಸೋಸಿಯೇಟ್​​ ಹುದ್ದೆಗಳ ಭರ್ತಿಗೆ SBI ಅಧಿಸೂಚನೆ: ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.