ETV Bharat / state

ಸರ್ಕಾರದ ವಿರುದ್ಧ ಸವಿತಾ ಸಮಾಜದ ಮುಖಂಡ  ಶಿವಕುಮಾರ್ ಅಸಮಾಧಾನ - Bangalore

ಕ್ಷೌರಿಕರಿಗೆ, ಮಡಿವಾಳರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಸಿಎಂ ಘೋಷಿಸಿದ ತಲಾ ಐದು ಸಾವಿರ ಪರಿಹಾರ ಇನ್ನು ಯಾರಿಗೂ ಸಿಕ್ಕಿಲ್ಲ ಎಂದು ಸವಿತಾ ಸಮಾಜದ ಮುಖಂಡ ಎಂಡಿ ಶಿವಕುಮಾರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sivakumar
ಶಿವಕುಮಾರ್ ಸವಿತಾ ಸಮಾಜದ ಮುಖಂಡ
author img

By

Published : May 21, 2020, 3:35 PM IST

ಬೆಂಗಳೂರು: ಕ್ಷೌರಿಕರಿಗೆ, ಮಡಿವಾಳರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಸಿಎಂ ಘೋಷಿಸಿದ ತಲಾ ಐದು ಸಾವಿರ ಪರಿಹಾರ ಇನ್ನು ಯಾರಿಗೂ ಸಿಕ್ಕಿಲ್ಲ. ಅಲ್ಲದೇ ಪರಿಹಾರ ಹಣ ಪಡೆಯುವ ಬಗ್ಗೆ ಇವರಿಗೆ ಸರಿಯಾದ ಮಾಹಿತಿ ಕೂಡ ಸಿಗುತ್ತಿಲ್ಲ ಎಂದು ಸವಿತಾ ಸಮಾಜದ ಮುಖಂಡ ಎಂಡಿ ಶಿವಕುಮಾರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಕುಮಾರ್ ಸವಿತಾ ಸಮಾಜದ ಮುಖಂಡ

ಸರ್ಕಾರ ಪರಿಹಾರ ಹಣವೇನೋ ಘೋಷಿಸಿದೆ. ಆದರೆ ಇದುವರೆಗೂ ನಮಗೆ ಈ ಹಣ ಕೈಸೇರಿಲ್ಲ ಲಾಕ್​ಡೌನ್ ಸಡಿಲಿಕೆ ಆಗಿದೆ. ಈ ಕಷ್ಟದ ಸಮಯದಲ್ಲಿ ಹಣ ನೀಡಿದ್ರೆ ನಮಗೂ ಸಹಾಯ ಆಗ್ತಿತ್ತು ಎಂದು ಹೇಳಿದ ಶಿವಕುಮಾರ್ ಪರಿಹಾರ ಹಣ ಪಡೆಯಲು ಸರ್ಕಾರ ವಿಧಿಸಿರುವ ಷರತ್ತುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೌರಿಕರು ಪರಿಹಾರ ಹಣ ಪಡೆಯಲು ಸಲೂನ್ ಶಾಪ್​ಗೆ ಲೈಸೆನ್ಸ್ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಇದು ಸರಿಯಾದ ನಿರ್ಧಾರ ಅಲ್ಲ, ಯಾಕಂದರೆ, ಶೇ 90 ರಷ್ಟು ಕ್ಷೌರಿಕರು ಮತ್ತು ಮಡಿವಾಳರು ಲೈಸೆನ್ಸ್ ಮಾಡಿಸಿಲ್ಲ. ಅಲ್ಲದೇ ಈಗ ಲೈಸೆನ್ಸ್ ಮಾಡಿಸಿ ಪರಿಹಾರ ಹಣ ಪಡೆಯ ಬೇಕಾದರೆ ಲೈಸೆನ್ಸ್ ಪಡೆಯಲು ನಾವು 2 ರಿಂದ 3 ಸಾವಿರ ಖರ್ಚಾಗುತ್ತದೆ. ಇದರಿಂದ ನಮಗೂ ಉಪಯೋಗ ಇಲ್ಲ ಎಂದರು.

ಒಂದು ವೇಳೆ, ಸರ್ಕಾರ ಲೈಸೆನ್ಸ್ ಕಡ್ಡಾಯ ಮಾಡಿದ್ದೆ ಆದರೆ, ಸಂಬಂಧ ಪಟ್ಟ ಅಧಿಕಾರಿಗಳನ್ನು ನಮ್ಮ ಅಂಗಡಿಗಳ ಬಳಿ ಕಳುಹಿಸಿ ಒಂದು ಲೈಸೆನ್ಸ್​​ಗೆ 25 ರಿಂದ 50 ರೂ ಶುಲ್ಕ ಪಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇನ್ನು ಸರ್ಕಾರದ ಪರಿಹಾರ ಹಣ ಕಟ್ಟಡ ಕಾರ್ಮಿಕರಿಗೂ ಇನ್ಜು ಕೈಸೇರಿಲ್ಲ. ಸರ್ಕಾರ ಈ ಕೂಡಲೇ ಕಟ್ಟಡ ಕಾರ್ಮಿಕರಿಗೆ ಪರಿಹಾರ ಹಣ ನೀಡಬೇಕು ಸುಮ್ಮನೆ‌ ಬಾಯಿ ಮಾತಿಗೆ ಹೇಳಿದ್ರೆ ನಮ್ಮ ಹೊಟ್ಟೆ ತುಂಬಲ್ಲ ಎಂದು ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಶಿವಸ್ವಾಮಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.