ETV Bharat / state

ಸಾವಿರ ಪರ್ಸಟೇಂಜ್‌ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುತ್ತೇವೆ: ಡಿಸಿಎಂ ಅಶ್ವತ್ಥ್ ನಾರಾಯಣ್ - ಸಾವಿರ ಪರ್ಸೆಂಟೇಜ್ ಮೇಲುಸೇತುವೆ

ಸಾವರ್ಕರ್ ದೇಶಕ್ಕೆ ಹೋರಾಡಿದ ಮಹಾನ್ ವ್ಯಕ್ತಿ. ದೇಶಕ್ಕಾಗಿ ಹಿಂಸೆ ಸಹಿಸಿಕೊಂಡು ಹೋರಾಟ ಮಾಡಿದವರು. ಸಾವರ್ಕರ್ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಸಾವರ್ಕರ್ ಹೆಸರು ನಾಮಕರಣ ಇಂದಿನ ಪೀಳಿಗೆಗೆ ಪ್ರಸ್ತುತ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

dcm-ashwath-narayan
ಡಿಸಿಎಂ ಅಶ್ವತ್ಥ್ ನಾರಾಯಣ್
author img

By

Published : May 28, 2020, 9:06 PM IST

ಬೆಂಗಳೂರು: ಪ್ರತಿಪಕ್ಷಗಳು ಇಲ್ಲಸಲ್ಲದ ಹೇಳಿಕೆ ಕೊಟ್ಟು ಸಾವರ್ಕರ್​ಗೆ ಅಗೌರವ ತೋರಿದ್ದಾರೆ. ಸಾವಿರ ಪರ್ಸಟೇಂಜ್‌ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾವರ್ಕರ್ ವಿಚಾರವಾಗಿ ಕ್ಷುಲ್ಲಕವಾಗಿ ಕಳಂಕ ತರಲು ಪ್ರತಿಪಕ್ಷಗಳು ಮಾಡುತ್ತಿವೆ‌. ನಮ್ಮ ರಾಜ್ಯದ ಮಹಾನ್ ವ್ಯಕ್ತಿಗಳ ಹೆಸರು ಈಗಾಗಲೇ ನಾಮಕರಣ ಮಾಡಲಾಗಿದೆ. ಸಾವರ್ಕರ್ ದೇಶಕ್ಕೆ ಹೋರಾಡಿದ ಮಹಾನ್ ವ್ಯಕ್ತಿ. ದೇಶಕ್ಕಾಗಿ ಹಿಂಸೆ ಸಹಿಸಿಕೊಂಡು ಹೋರಾಟ ಮಾಡಿದವರು. ಸಾವರ್ಕರ್ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಸಾವರ್ಕರ್ ಹೆಸರು ನಾಮಕರಣ ಇಂದಿನ ಪೀಳಿಗೆಗೆ ಪ್ರಸ್ತುತ ಎಂದು ತಿಳಿಸಿದರು.

ನಾಲ್ಕು ಹಂತದ ಲಾಕ್​ಡೌನ್​ನಲ್ಲಿ ಹಲವು ವಿನಾಯತಿ ಕೊಡಲಾಗಿದೆ. 5ನೇ ಹಂತದ ಲಾಕ್​ಡೌನ್​ನಲ್ಲಿಯೂ ಕೆಲವು ವಿನಾಯಿತಿ ಕೋರಿ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಮಾಲ್, ರೆಸ್ಟೋರೆಂಟ್​ಗಳ ಓಪನ್ ಮಾಡಲು ಮನವಿ ಬಂದಿದೆ‌. ಶಾಲಾ-ಕಾಲೇಜುಗಳ ಓಪನ್​ಗೂ ಮನವಿ ಬಂದಿದೆ. ಜೂ. 1 ರಿಂದ ವಿವಿಧ ಕ್ಷೇತ್ರಗಳಲ್ಲಿ ಸಡಿಲಿಕೆ ಕೊಡಬೇಕು ಎಂಬ ಒತ್ತಾಯ ಬಂದಿದೆ. ಸಿನಿಮಾ, ಮಾಲ್ ಬಿಟ್ಟು ಬಾಕಿ ಕ್ಷೇತ್ರದಲ್ಲಿ ಸಡಿಲಗೊಳಿಸುವ ಒತ್ತಾಯ ಇದೆ ಎಂದರು.

ಡಿಸಿಎಂ ಅಶ್ವತ್ಥ್ ನಾರಾಯಣ್

ವೈರಸ್ ನಮ್ಮನ್ನು ಬಿಟ್ಟು ಹೋಗಲ್ಲ. ಹಲವು ವೈರಸ್​ಗಳ ಜೊತೆ ಕೊರೊನಾ ವೈರಸ್ ಕೂಡಾ ಇರುತ್ತದೆ. ಚಿಕಿತ್ಸೆ ಕಂಡು ಹಿಡಿಯುವವರೆಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿವರಿಸಿದರು.

ಗಮನ ಬೇರೆಡೆ ಸೆಳೆಯುವ ಯತ್ನ:

ಕೋವಿಡ್- 19 ನಿಯಂತ್ರಿಸುವ ವಿಚಾರದಲ್ಲಿ ಅವ್ಯವಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಇದೊಂದು ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಎಂದರು.

ಪಿಪಿಇ ಕಿಟ್​ನ್ನು ಯಾರು ಎಲ್ಲಿ ಬೇಕೆಂದರಲ್ಲಿ ಖರೀಸಲು ಅವಕಾಶ ಇಲ್ಲ. ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ವಿವಿಧ ಸಾಮಗ್ರಿಗಳು ನಮ್ಮಲ್ಲಿ ಎಲ್ಲ ಉತ್ಪಾದನೆ ಆಗ್ತಿವೆ. ಆರಂಭದ ಪರಿಸ್ಥಿತಿಗೂ ಸದ್ಯದ ಪರಿಸ್ಥಿತಿಗೂ ವ್ಯತ್ಯಾಸ ಇದೆ. ದುರುದ್ದೇಶದಿಂದ ಯಾರು ಕೆಲಸ ಮಾಡ್ತಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.