ಬೆಂಗಳೂರು: ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಸ್ಪರ್ಧಿಯಾಗಿ ಖ್ಯಾತಿ ಪಡೆದಿದ್ದ ಗಾಯಕ ಹಾಗೂ ಹೆಡ್ಕಾನ್ಸ್ಟೇಬಲ್ ಸುಮ್ರಮಣಿ ಅವರ ಪತ್ನಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೆ.ಆರ್.ಪುರಂ ಪೊಲೀಸ್ ಠಾಣೆ ಬರಹಗಾರ (ರೈಟರ್) ಆಗಿದ್ದ ಸುಬ್ರಮಣ್ಯ ಪತ್ನಿಗೆ ಒಂದು ವಾರದ ಹಿಂದೆ ಪಾಸಿಟಿವ್ ಕಂಡು ಬಂದಿತ್ತು. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು. ಯಾವ ಆಸ್ಪತ್ರೆಯಲ್ಲಿಯೂ ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ ಅವರ ಪತ್ನಿಗೆ ಕೊನೆಗೂ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.