ETV Bharat / state

ರೈಲು ದುರಂತ: ಕನ್ನಡಿಗರ ಸುರಕ್ಷತೆಗಾಗಿ ಘಟನಾ ಸ್ಥಳಕ್ಕೆ ಸಂತೋಷ್ ಲಾಡ್; ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು

ರೈಲು ದುರಂತ ಜರುಗಿದ ಸ್ಥಳಕ್ಕೆ ತೆರಳಿ ಕನ್ನಡಿಗರ ಬಗ್ಗೆ ಸುರಕ್ಷತೆ ವಹಿಸುವಂತೆ ಸಚಿವ ಸಂತೋಷ್​ ಲಾಡ್​ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

Santosh Lad and Dharwad Railway Overpass
ಸಂತೋಷ್​ ಲಾಡ್​ ಹಾಗೂ ಧಾರವಾಡ ರೈಲ್ವೇ ಮೇಲ್ಸೇತುವೆ
author img

By

Published : Jun 3, 2023, 12:40 PM IST

Updated : Jun 3, 2023, 3:11 PM IST

ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು

ಬೆಂಗಳೂರು/ಧಾರವಾಡ: ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ.

ಅಪಘಾತಕ್ಕೀಡಾದವರ ಕುಟುಂಬದ ಸದಸ್ಯರ ಅನುಕೂಲಕ್ಕಾಗಿ ಚೆನ್ನೈನಿಂದ ಭದ್ರಕ್ (ಒಡಿಶಾ) ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಶೇಷ ರೈಲು ಸಂಖ್ಯೆ 02840 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್​ನಿಂದ ಇಂದು ರೈಲು ಸಂಖ್ಯೆ 12840 ಚೆನ್ನೈ - ಹೌರಾ ಮೇಲ್ ಹೊರಡುವ ಸಮಯಕ್ಕೆ ತೆರಳಲಿದೆ. ಒರಿಸ್ಸಾದಲ್ಲಿ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಅಪಘಾತದಕ್ಕೆ ಸಂಬಂಧಿಸಿ ಸಹಾಯವಾಣಿ ತೆರೆಯಲಾಗಿದ್ದು, ಕೆ.ಆರ್.ಪುರಂ- 8861203980 ಬೈಯಪ್ಪನಹಳ್ಳಿ- 9606005129 ಕುಪ್ಪಂ- 8431403419 ಬಂಗಾರಪೇಟೆ- 081532552080 ಬೆಂಗಳೂರು-29-2953255256 ಆಗಿದೆ.

ರೈಲು ದುರಂತ ಹಿನ್ನೆಲೆ ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು: ಒಡಿಶಾದಲ್ಲಿ ಜರುಗಿದ ರೈಲು ದುರಂತದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಂದು (ಶನಿವಾರ) ಸಂಜೆ ನಡೆಯಬೇಕಿದ್ದ ರೈಲ್ವೇ ಲೆವೆಲ್​ ಕ್ರಾಸಿಂಗ್​ ಗೇಟ್​ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಧಾರವಾಡ ನಗರದ ಕಲ್ಯಾಣ ನಗರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಿರ್ಮಾಣ ಮಾಡಲಾಗಿದ್ದು, ಇಂದು ಸಂಜೆ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಸೇತುವೆ ಉದ್ಘಾಟನೆ ಮಾಡಲಿದ್ದರು. ಇದೀಗ ಒಡಿಶಾದಲ್ಲಿ ರೈಲ್ವೆ ದುರಂತ ಸಂಭವಿಸಿದ ಹಿನ್ನೆಲೆ ಕೇಂದ್ರ ಸಚಿವ ಕಾರ್ಯಕ್ರಮ ರದ್ದಾಗಿದೆ. ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ರೈಲ್ವೆ ಇಲಾಖೆ ಭರ್ಜರಿ ಸಿದ್ಧತೆ ಸಹ ಮಾಡಿಕೊಂಡಿತ್ತು. ಕಲ್ಯಾಣ ನಗರದ ಮೇಲ್ಸೇತುವೆ ಪಕ್ಕದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು.

ಆದರೆ, ರೈಲ್ವೆ ದುರಂತ ಸಂಭವಿಸಿದ ಕಾರಣ ಇದೀಗ ವೇದಿಕೆಯನ್ನು ಸಹ ತೆಗೆಯಲಾಗುತ್ತಿದೆ. ಸೇತುವೆ ಉದ್ಘಾಟನೆ ಜೊತೆಗೆ ಎರಡು ಶಂಕುಸ್ಥಾಪನೆ ಕಾರ್ಯಕ್ರಮ ಸಹ ರದ್ದುಗೊಂಡಿದ್ದು, ಧಾರವಾಡದ ಶ್ರೀನಗರ ಗೇಟ್ ನಂಬರ್ 299 ಮತ್ತು ಗಣೇಶನಗರ ಬಳಿ ರೇಲ್ವೆ ಗೇಟ್ ನಂಬರ್ 300 ಸೇತುವೆಗೆ ಶಂಕು ಸ್ಥಾಪನೆ ನೇರವೇರಲಿತ್ತು. ಇದೀಗ ಎಲ್ಲಾ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.

ರೈಲು ದುರಂತದಲ್ಲಿ ಮೃತಪಟ್ಟವರಿಗೆ ಡಿಕೆಶಿ ಸಂತಾಪ: 230ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿರುವ ಒಡಿಶಾ ರೈಲು ದುರಂತದ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಬಾಲಸೋರ್​ನಲ್ಲಿ ಸಂಭವಿಸಿರುವ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ.

ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರೀಕರ ಅನುಕೂಲಕ್ಕಾಗಿ ಸಹಾಯವಾಣಿ ಸಂಖ್ಯೆ 1070, 080-22253707, 080-22340676 ತೆರೆಯಲಾಗಿದೆ

ಇದನ್ನೂ ಓದಿ: ಘನಘೋರ ರೈಲು ದುರಂತ: ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯ, ಉನ್ನತ ಮಟ್ಟದ ತನಿಖೆಗೆ ಆದೇಶ

Last Updated : Jun 3, 2023, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.