ಯುಕೆಯ ಜನಪ್ರಿಯ 'ಮಿಲ್ಲೀಸ್' ಬೇಕರಿ ಉತ್ಪನ್ನಗಳ ಸಂಸ್ಥೆ ಮೈಲ್ ಕುಕೀಸ್ ಬೆಂಗಳೂರು ಮಾರುಕಟ್ಟೆಗೂ ಕಾಲಿಟ್ಟಿದ್ದು, ವೈಟ್ಫೀಲ್ಡ್ನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಹೊಸ ಮಳಿಗೆಯೊಂದನ್ನು ಆರಂಭಿಸಿದೆ.
ಮಿಲ್ಲೀಸ್ನ ಹೊಸ ಮಳಿಗೆಯನ್ನು ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ ಉದ್ಘಾಟಿಸಿ ಬ್ಯುಸಿನೆಸ್ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಮಿಲ್ಲೀಸ್ ತನ್ನ 11ನೇ ಮಳಿಗೆಯನ್ನು ದೇಶದಲ್ಲಿ ಆರಂಭಿಸುತ್ತಿದ್ದು, ಬೆಂಗಳೂರಿಗಿಂತ ಮೊದಲು ದಿಲ್ಲಿ, ಮುಂಬೈ, ಹೈದರಾಬಾದ್, ಕೋಲ್ಕತ್ತಾ ಹಾಗೂ ಸೂರತ್‌ಗಳಲ್ಲಿ ತನ್ನ ಮಳಿಗೆಗಳನ್ನು ಆರಂಭಿಸಿದೆ. ಮೂರು ದಶಕಗಳಿಗೂ ಅಧಿಕ ಸಮಯದಿಂದ ಮಿಲ್ಲೀಸ್ ತಾಜಾ ಕೇಕ್ ಹಾಗೂ ಮೃದುವಾದ ಕುಕೀಸ್ಗಳನ್ನು ಪ್ರತಿದಿನ ಫ್ರೆಶ್ ಆಗಿ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುವ ಕೆಲಸ ಮಾಡುತ್ತಿದೆ.
ಮಿಲ್ಲೀಸ್ ಕುಕೀಸ್ ಮಾಲೀಕ ಹರೀಶ್ ಮಾತನಾಡಿ, ನಾನು ಜನಪ್ರಿಯ ಉತ್ಪನ್ನದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಮಿಲ್ಲೀಸ್ ಇತ್ತೀಚೆಗೆ ಕುಕೀಸ್ಗಳಿಂದಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಯುಕೆಯಲ್ಲಿ ಕಳೆದ ಮೂರು ದಶಕಗಳಿಂದ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಹೊಸ ಬಗೆಯ ತಿಂಡಿಗಳು, ಕುಕೀಸ್‌ಗಳು ಹಾಗೂ ಕೇಕ್ಗಳನ್ನು ತಯಾರಿಸುವ ವಿಚಾರದಲ್ಲಿ ಹೊಸ ಪ್ರಯೋಗಗಳನ್ನು ಇಷ್ಟಪಡುವುದಿಲ್ಲ. ಸಾಂಪ್ರದಾಯಿಕ ರುಚಿ ಒಳಗೊಂಡ ಮಿಲ್ಲೀಸನ್ನು ನಾವು ಬೆಂಗಳೂರಿನ ಆಹಾರಪ್ರಿಯರ ನೆಚ್ಚಿನ ತಾಣವಾಗಿಸುವ ಗುರಿ ಹೊಂದಿದ್ದೇವೆ ಎಂದರು.