ಬೆಂಗಳೂರು: ಹಂದಿ ಸಾಗಾಣೆ ಜೊತೆಗೆ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪುಂಗನೂರು ಟೌನ್ನ ಎ.ವಿಜಯ್ (23) ಮತ್ತು ಎನ್.ಎಸ್.ಪೇಟೆಯ ಶಿವಕುಮಾರ್ (37) ಬಂಧಿತರು.
ಈ ಇಬ್ಬರು ಒಡಿಶಾದಿಂದ ನಗರಕ್ಕೆ ಗಾಂಜಾ ತಂದು ಹೋಲ್ಸೇಲ್ ಆಗಿ ಮಾರಾಟ ಮಾಡುತ್ತಿದ್ದರು. ಇದರ ಜೊತೆಗೆ ನಗರಕ್ಕೆ ಬರುವ ಗೂಡ್ಸ್ ವಾಹನ ಚಾಲಕರಿಗೆ ಹೆಚ್ಚಿನ ಹಣ ನೀಡುವ ಆಮಿಷವೊಡ್ಡಿ ಹಂದಿಗಳ ಕಳ್ಳ ಸಾಗಾಣೆ ಮಾಡುತ್ತಿದ್ದರು. ಬಂಧಿತರಿಂದ ಸುಮಾರು 75 ಕೆ.ಜಿ ತೂಕದ ಗಾಂಜಾ, ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.