ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ,ನಟ ಸಂತೋಷ್ ಕುಮಾರ್ ಹಾಗೂ ಮಾಜಿ ಶಾಸಕ ಆರ್ವಿ ದೇವರಾಜ್ ಮಗ ಯುವರಾಜ್ ಇಂದು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಲಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಈಗಾಗಲೇ ನಟಿ ರಾಗಿಣಿ, ಸಂಜನಾ, ಪ್ರತೀಕ್ ಶೆಟ್ಟಿ, ವೈಭವ್ ಜೈನ್ ಹಾಗೂ ಇತರೆ ಆರೋಪಿಗಳಿಂದ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ಇಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಈ ಮೂವರ ವಿಚಾರಣೆ ನಡೆಸಲಿದ್ದಾರೆ. ಇದರ ಮಧ್ಯೆ ಅಕುಲ್ ಬಾಲಾಜಿ ಹೈದರಾಬಾದ್ನಲ್ಲಿರುವ ಕಾರಣ ಬೆಳಗ್ಗೆ 11ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಮೂವರ ಬಳಿಯಿಂದ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಐಂದ್ರಿತಾ ಹಾಗೂ ದಿಗಂತ್ ವಿಚಾರಣೆ ನಡೆಸಿದ್ದರು. ಈ ವೇಳೆ ಅಕುಲ್ ಬಾಲಾಜಿ ಮತ್ತು ಸಂತೋಷ್ ಹೆಸರು ಪ್ರಸ್ತಾಪವಾಗಿದೆ. ಪ್ರತೀಕ್ ಶೆಟ್ಟಿ ನಡೆಸಿದ್ದ ಪಾರ್ಟಿಗಳಲ್ಲಿ ಯಾರೆಲ್ಲಾ ಭಾಗಿಯಾಗ್ತಿದ್ರು ಅನ್ನೋ ಕುರಿತಂತೆ ಅಧಿಕಾರಿಗಳಿಗೆ ದಿಗಂತ್ - ಐಂದ್ರಿತಾ ಮಾಹಿತಿ ನೀಡಿದ್ದರು ಎನ್ನಲಾಗ್ತಿದೆ.