ಬೆಂಗಳೂರು: ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ - 2 ಮತ್ತು ಈಗ 0% ಲವ್ ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ಡಾ. ಡಿ.ಎಸ್.ಮಂಜುನಾಥ್ (ಅರ್ಜುನ್ ಮಂಜುನಾಥ್) ಕೋವಿಡ್ಗೆ ಬಲಿಯಾಗಿದ್ದಾರೆ.
1 ವಾರದಿಂದನ್ನು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಮಂಜುನಾಥ್ಗೆ ಲಂಗ್ಸ್ ಬ್ಲಾಕ್ ಆಗಿ ಉಸಿರಾಟದ ತೊಂದರೆ ಉಂಟಾಗಿತ್ತು. ಐಸಿಯುನಿಂದ ಹೆಚ್ಚು ಆಮ್ಲಜನಕ ಪೂರೈಸುವ ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಗಿತ್ತು ಎಂದು 0% ಲವ್ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದರು. ವೆಂಟಿಲೇಟರ್ನಲ್ಲಿದ್ದಾಗ ಹಾರ್ಟ್ ಅಟ್ಯಾಕ್ ಉಂಟಾಗಿದೆ ಎಂದು ಮಾಹಿತಿ ನೀಡಿದರು. 3 ದಿನದಿಂದ ಜಯನಗರದ ಅಶೋಕ ಪಿಲ್ಲರ್ ಬಳಿಯಿರುವ ಬಿಗ್ ಹಾಸ್ಪಿಟಲ್ ದಾಖಲಾಗಿದ್ದರು ಎಂದು ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಆರ್.ಆರ್ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಈ ಮೊದಲು ದಾಖಲಾಗಿದ್ದರು. ಇಲ್ಲಿಯ ತನಕ ಹಾಸ್ಪಿಟಲ್ ಹೋಗಿರಲಿಲ್ಲದ ಮಂಜುನಾಥ್ಗೆ ಕೋವಿಡ್ ಲಕ್ಷಣಗಳು ಮುಂಚೇನೂ ಕಾಣಿಸಿಕೊಂಡಿತ್ತು. ಆದರೆ ಮೊದಲು ಅಷ್ಟು ಗಮನಹರಿಸಿರಲಿಲ್ಲ ಎಂದು ನಿರ್ಮಾಪಕ ತಿಳಿಸಿದರು.
ಫುಡ್ ಕಿಟ್, ದಿನಸಿ ವಿತರಣೆ ಹೀಗೆ ಕೋವಿಡ್ ಲಾಕ್ಡೌನ್ನಲ್ಲಿ ಸಮಾಜಮುಖಿಯಾಗಿ ಸೇವೆ ಮಾಡಿದ್ದರು. ಸುಮಾರು 5000 ಜನರಿಗೆ ರೇಷನ್, ತರಕಾರಿ ವಿತರಿಸಿದ್ದರು. ಆತ ತುಂಬಾ ಒಳ್ಳೆಯ ಮನುಷ್ಯ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು ಎಂದು ನೆನೆದರು.
ಉತ್ತರ ಕನ್ನಡ ಪ್ರವಾಹ ಸಮಯದಲ್ಲಿ ರೇಷನ್, ಬಟ್ಟೆ ಹಂಚಿದ್ದರು. ಜೂನ್ 22 ಮಂಜುನಾಥ್ ಬರ್ತ್ ಡೇ ಇತ್ತು. 0% ಲವ್ ಫಿಲಂ ರಿಲೀಸ್ ಪ್ಲಾನ್ ಮಾಡಿದ್ದೆವು ಎಂದು ಕೃಷ್ಣಮೂರ್ತಿ ತಿಳಿಸಿದರು. ಡಾ. ಡಿ.ಎಸ್.ಮಂಜುನಾಥ್ ಅವರ ಅಂತಿಮ ವಿಧಿ ವಿಧಾನವನ್ನು ಬೆಂಗಳೂರು ಗ್ರಾಮೀಣ ದೊಡ್ಡೇರಿ ಗ್ರಾಮದ ಚಿತಾಗಾರದಲ್ಲಿ ನೆರವೇರಿಸಲಾಗಿದೆ.