ETV Bharat / state

ಒಂದೇ ಪಂಜರದಲ್ಲಿ ರಾತ್ರಿ ಕಳೆದ ರಾ'ಗಿಣಿ'-ಸಂಜನಾ - ಬೆಂಗಳೂರು ಸುದ್ದಿ

ನಟಿಯರಿಬ್ಬರ ಮೊಬೈಲ್​ನಲ್ಲಿ ಕೂಡ ಪೊಲೀಸರಿಗೆ ಬೇಕಾದ ಸಾಕ್ಷ್ಯ, ಹಾಗೆಯೇ ನಟಿಯರಿಬ್ಬರು ರೆಸಾರ್ಟ್, ಪಬ್​​ಗಳಲ್ಲಿ ಪಾರ್ಟಿ ಮಾಡುತ್ತಿದ್ದ ವಿಚಾರ ಗೊತ್ತಾಗಿದ್ದು, ಇದರ ಆಧಾರದ ಮೇರೆಗೆ ಇಂದು ತನಿಖೆ ಮುಂದುವರೆಯಲಿದೆ.

ಒಂದೆ ಪಂಜರದಲ್ಲಿ ರಾತ್ರಿ ಕಳೆದ ರಾ'ಗಿಣಿ'-ಸಂಜನಾ

author img

By

Published : Sep 9, 2020, 9:11 AM IST

ಬೆಂಗಳೂರು: ಮಾದಕ ದ್ರವ್ಯ ಸಪ್ಲೈ ಹಾಗೂ ಸೇವನೆ ಮಾಡಿದ ಆರೋಪ ಹೊತ್ತಿರುವ ನಟಿ ಸಂಜನಾ ಗುಲ್ರಾನಿ ಹಾಗೂ ರಾಗಿಣಿ ಕಳೆದ ರಾತ್ರಿ ಒಂದೇ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದಾರೆ.

ಕೆ.ಪಿ.ಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಾಗ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನವಾದಾಗ ನಾನೇನೂ ಅದರ ಬಗ್ಗೆ ಮಾತಾಡಲ್ಲವೆಂದು ನಟಿ ಸಂಜನಾ ಮಾಧ್ಯಮದ ಎದುರು ಹೇಳಿಕೆ ಕೊಟ್ಟಿದ್ದರು. ಸದ್ಯ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿ ಇಬ್ಬರೂ ಕಿದ್ವಾಯಿ ಸಮೀಪ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ 5 ಬೆಡ್ ಇರುವ ಒಂದೇ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಾರೆ. ಹಾಗೆಯೇ ರಾತ್ರಿ ಪೂರ್ತಿ ಭದ್ರತೆಗಾಗಿ ಕೊಠಡಿಯಲ್ಲಿ ಇಬ್ಬರು ಮಹಿಳಾ ಪೇದೆ ಹಾಗೂ ಸಬ್ ಇನ್ಸ್​​​ಪೆಕ್ಟರ್​​​ವೊಬ್ಬರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಇಂದು ನಟಿಯರ ವಿಚಾರಣೆಯನ್ನ ಸಿಸಿಬಿ ಅಧಿಕಾರಿಗಳು ನಡೆಸಲು ಮುಂದಾಗಿದ್ದಾರೆ. ಸದ್ಯ ತನಿಖೆಗೆ ನಟಿ ಸಂಜನಾ ಸರಿಯಾದ ರೀತಿ ಪ್ರತಿಕ್ರಿಯೆ ನೀಡುತ್ತಿದ್ದು, ರಾಗಿಣಿ ಸೂಕ್ತವಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಪಕ್ಕಾ ಸಾಕ್ಷ್ಯ ಕಲೆಹಾಕಿದ್ದು, ರಾಗಿಣಿ ಹಾಗೂ ಸಂಜನಾರನ್ನ ಸಾಕ್ಷ್ಯಗಳ ಆಧಾರದ ಮೇರೆಗೆ ತನಿಖೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.