ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟ ದಿಗಂತ್ ಸಿಸಿಬಿ ವಿಚಾರಣೆಗೆ ಮತ್ತೆ ಹಾಜರಾಗಿದ್ದಾರೆ.
ಸುಮಾರು 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ನೋಟಿಸ್ ನೀಡಿದ್ರು. ಹೀಗಾಗಿ ಶೂಟಿಂಗ್ ಸ್ಪಾಟ್ನಿಂದ ಚಾಮಾರಾಜಪೇಟೆಯ ಕಚೇರಿಗೆ ತಮ್ಮ ಕಾರಿನಲ್ಲಿ ದಿಗಂತ್ ಆಗಮಿಸಿದರು.
ಸಿಸಿಬಿ ಕಚೇರಿಯಲ್ಲಿ ಸದ್ಯ ಎಸಿಪಿ ಗೌತಮ್ ಮತ್ತು ಇನ್ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ. ಕೊಂಚ ಸಮಯದ ನಂತರ ಹಿರಿಯಾಧಿಕಾರಿಗಳಾದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ವಿಚಾರಣೆ ನಡೆಸಲಿದ್ದಾರೆ.
ದಿಗಂತ್ಗೆ ಬಂಧಿತ ಪೆಡ್ಲರ್ಗಳ ಮಾಹಿತಿ ಹಾಗೆಯೇ ಮೊಬೈಲ್ ರಿಟ್ರೇವ್ ಆದ ಮಾಹಿತಿ ಆಧಾರದ ಮೇಲೆ ಪ್ರಶ್ನೆಗಳು ಎದುರಾಗಲಿವೆ. ಹಾಗೆಯೇ ಸೆಪ್ಟೆಂಬರ್ 16ರಂದು ವಿಚಾರಣೆಗೆ ಹಾಜರಾದಾಗ ಬಹುತೇಕ ತಬ್ಬಿಬ್ಬಾಗಿದ್ರು. ಪ್ರಕರಣದ ಬಂಧಿತ ಆರೋಪಿಗಳ ಜೊತೆ ದಿಗಂತ್ ಹಾಗೂ ಐದ್ರಿಂತಾ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎನ್ನಲಾಗಿದೆ. ಸದ್ಯ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ.
ಶ್ರೀಲಂಕಾ ಕ್ಯಾಸಿನೋ ವಿಚಾರ, ಪ್ರತಿಷ್ಟಿತ ಸ್ಟಾರ್ ಹೋಟೆಲ್ಗಳ ಪಾರ್ಟಿ, ಡ್ರಗ್ಸ್ ಕುರಿತು ಇಂದು ವಿಚಾರಣೆ ನಡೆಯಲಿದೆ.