ETV Bharat / state

ಸಿನಿಮಾ, ರಾಜಕೀಯ, ರಿಯಲ್​ ಎಸ್ಟೇಟ್​ ಕೈಕೊಟ್ಟ ನಂತರ  ಡ್ರಗ್ಸ್​ ಜಾಲಕ್ಕೆ ಸಿಕ್ಕಿಬಿದ್ದರಾ ರಾಗಿಣಿ?

ಡ್ರಗ್ ಜಾಲದ ನಂಟು ಆರೋಪದಲ್ಲಿ ಬಂಧಿತಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಿನಿಮಾ ಆಫರ್​ ಕಡಿಮೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ತುಂಬಾ ಪ್ರಯತ್ನಪಟ್ಟಿದ್ದಳು. ಇದಕ್ಕಾಗಿ ಪಕ್ಷವೊಂದರ ಮುಖಂಡರನ್ನು ಭೇಟಿಯಾಗಿ ಸತತ ಪ್ರಯತ್ನವನ್ನೂ ಮಾಡಿದ್ದಳು.

author img

By

Published : Sep 15, 2020, 2:47 PM IST

sandalwood Drug link Case update
ಸ್ಯಾಂಡಲ್​ವುಡ್​ ಡ್ರಗ್​ ಜಾಲ ನಂಟು ಪ್ರಕರಣ

ಬೆಂಗಳೂರು: ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಕೆಲವೇ ವರ್ಷಗಳಲ್ಲಿ ಖ್ಯಾತಿ ಗಳಿಸಿದ್ದಳು. ಆದರೆ, ಈಗ ಅಷ್ಟೇ ವೇಗದಲ್ಲಿ ಕುಖ್ಯಾತಿ ಕೂಡ ಗಳಿಸಿದ್ದಾಳೆ.

ಕಿಚ್ಚ ಸುದೀಪ್‌ ‌ನಿರ್ದೇಶನದ ವೀರ ಮದಕರಿ ಚಿತ್ರದ ಮೂಲಕ ರಾಗಿಣಿ‌ ಮೊದಲ ಬಾರಿಗೆ ಬೆಳ್ಳಿ‌ ಪರದೆ ಮೇಲೆ ನಾಯಕಿಯಾಗಿ ಕಾಣಿಸಿಕೊಂಡಿದ್ದಳು. ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಗಿಣಿ, ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಳು. ಕಾಲ‌ ಕ್ರಮೇಣ ಸಿನಿಮಾ ಆಫರ್​​ಗಳು ಕಡಿಮೆಯಾದಂತೆ ರಾಜಕೀಯದಲ್ಲಿ ಗುರುತಿಸಿಕೊಂಡರೆ ಭವಿಷ್ಯ ಉಜ್ವಲವಾಗಲಿದೆ ಎಂದು‌ ಯೋಚಿಸಿದ ರಾಗಿಣಿ, ಮೊದಲ ಹೆಜ್ಚೆಯಾಗಿ ಎನ್​ಜಿಒ ಮೂಲಕ ಕೆಲವೊಂದು ಸಮಾಜ ಸೇವೆಗಳನ್ನು ಮಾಡುತ್ತಿದ್ದಳು. ಜೊತೆಗೆ ನಾಯಕಿ ಪ್ರಧಾನ ಸಿನಿಮಾ‌ ಮಾಡಿ ಜನರ ಮನ ಗೆಲ್ಲಲು ಪ್ಲಾನ್ ಹಾಕಿದ್ದಳು. ಇದೇ ಉದ್ದೇಶಕ್ಕಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವೊಂದರ ಪರ ಸ್ಟಾರ್ ಪ್ರಚಾರಕಿಯಾಗಿಯೂ ಕಾಣಿಸಿಕೊಂಡಿದ್ದಳು.

ಯೋಗ ಡೇ, ವಾಕಥಾನ್​ನಂತಹ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ, ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದ ಮೊದಲ ಆರೋಪಿಯಾಗಿರುವ ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಜೊತೆ ಸಿನಿಮಾ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್​ನಲ್ಲಿ ತೊಡಗಿಸಿ ನಷ್ಟ ಅನುಭವಿಸಿದ್ದಳು. ಆ ಬಳಿಕ ರವಿಶಂಕರ್ ಮೂಲಕ ರಾಜಕೀಯ ಸೇರಲು ಮುಂದಾಗಿದ್ದಳು. ಇದಕ್ಕಾಗಿಯೇ ರವಿಶಂಕರ್ ಕುಟುಂಬದ ರಾಜಕೀಯ ನಂಟು ಬೆಳೆಸಿಕೊಂಡಿದ್ದಳು. ರವಿಶಂಕರ್ ಜೊತೆ ಆಂಧ್ರ ಪ್ರದೇಶಕ್ಕೆ ತೆರಳಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಜೊತೆ ಚರ್ಚೆ ಮಾಡಿ, ಬಿಜೆಪಿ ಪಕ್ಷ ಸೇರಲು ಪ್ರಯತ್ನಪಟ್ಟಿದ್ದಳು. ‌ಈ ವೇಳೆ ಸಚಿವ ಆರ್.ಆಶೋಕ್​ರನ್ನು ಭೇಟಿ ಮಾಡುವಂತೆ ಮುರಳೀಧರ್​ ರಾವ್ ತಿಳಿಸಿದ್ದರಂತೆ. ಆದರೆ, ಇದಕ್ಕೆ ಆಶೋಕ್ ಒಪ್ಪಿರಲಿಲ್ಲ.

ನಂತರ ಅರವಿಂದ್ ಲಿಂಬಾವಳಿ ಮೂಲಕ ಪಕ್ಷ ಸೇರುವ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆಪ್ತ ರವಿಶಂಕರ್, ವಿರೇನ್ ಖನ್ನಾ ಮೂಲಕ ನಶೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ರಾಗಿಣಿ, ಪರೋಕ್ಷವಾಗಿ ಡ್ರಗ್ಸ್ ಮಾರಾಟಕ್ಕೆ‌ ಕುಮ್ಮಕ್ಕು ನೀಡುತ್ತಿದ್ದಳು. ‌ಈ ಮೂಲಕ ಹಣ ಸಂಪಾದ‌ನೆ ಮಾಡುತ್ತಿದ್ದಳು ಎನ್ನಲಾಗ್ತಿದೆ. ಆದರೆ, ಮಾದಕ ಜಾಲದ ನಂಟು ಈಗ ರಾಗಿಣಿಯನ್ನು ಕಂಬಿ ಎಣಿಸುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.