ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಸಂಬಂಧ ನೈಟ್ ಔಟ್ ಪಾರ್ಟಿಗಳಲ್ಲಿ ರೌಡಿಗಳು ಭಾಗಿಯಾಗುತ್ತಿದ್ದು, ಪಾರ್ಟಿಗಳಲ್ಲಿ ರೌಡಿಶೀಟರ್ಗಳು ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.
ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿರುವ ವಿರೇನ್ ಖನ್ನಾಗೆ ರೌಡಿಶೀಟರ್ ಇಷ್ತಿಯಾಕ್ ಅಹಮದ್ ಸಾಥ್ ನೀಡುತ್ತಿದ್ದ. ಖನ್ನಾ ಆಯೋಜಿಸಿದ್ದ ಡ್ರಗ್ಸ್ ಪಾರ್ಟಿಗಳ ಉಸ್ತುವಾರಿ ವಹಿಸುವುದಲ್ಲದೆ ವಿರೇನ್ ಖನ್ನಾನ ಎಲ್ಲಾ ವ್ಯವಹಾರಗಳಲ್ಲೂ ಭಾಗಿಯಾಗಿದ್ದ ಎಂದು ಹೇಳಲಾಗ್ತಿದೆ. ಶಿವಾಜಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ಇಷ್ತಿಯಾಕ್ ಅಹಮದ್ ಕೆಲವು ಪಾರ್ಟಿಗಳಲ್ಲಿ ಸ್ಟಾರ್ಗಳನ್ನು ಕರೆದುಕೊಂಡು ಬರುವ ಉಸ್ತುವಾರಿ ಹೊತ್ತಿದ್ದನಂತೆ. ಇಷ್ತಿಯಾಕ್ ಪತ್ನಿ ಫರೀದಾ ಸದ್ಯ ಶಿವಾಜಿನಗರದ ಕಾರ್ಪೊರೇಟರ್ ಆಗಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಡ್ರಗ್ಸ್ ಪೆಡ್ಲರ್ ರಾಹುಲ್ ಜೊತೆಗೂ ನಂಟು ಬೆಳೆಸಿಕೊಂಡಿದ್ದ. ನೈಟ್ ಔಟ್ ಪಾರ್ಟಿಗಳಿಗೆ ಇಷ್ತಿಯಾಕ್ ಬೆಂಬಲಿಗರನ್ನು ಬಂದೊಬಸ್ತ್ಗಾಗಿ ನೇಮಿಸುತ್ತಿದ್ದ ಎನ್ನಲಾಗ್ತಿದೆ. ಹಾಗಾಗಿ ಇಷ್ತಿಯಾಕ್ ಅಹಮದ್ಗೆ ಸಿಸಿಬಿ ನೊಟೀಸ್ ನೀಡುವ ಸಾಧ್ಯತೆಯಿದೆ.