ETV Bharat / state

65 ಲಕ್ಷ ಮೌಲ್ಯದ ಕೊರೊನಾ ಪರಿಕರಗಳನ್ನು ವಿತರಿಸಿದ ಸಮರ್ಥನಂ ಸಂಸ್ಥೆ

author img

By

Published : Jul 8, 2020, 12:11 PM IST

ಕೋವಿಡ್-19 ನಿಯಂತ್ರಣ ಪರಿಕರಗಳಾದ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇತರೆ ಸಾಧನಗಳನ್ನು ಸಮರ್ಥನಂ ಸಂಸ್ಥೆ ಇಂದು ಉಚಿತವಾಗಿ ವಿತರಿಸಿದೆ.

Samartanam institute
Samartanam institute

ಬೆಂಗಳೂರು: ಕೊರೊನಾದಿಂದ ತತ್ತರಿಸಿರುವ ರಾಜ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ನೆರವು ನೀಡಲು ಮುಂದಾಗುತ್ತಿದ್ದು, ಸಮರ್ಥನಂ ವಿಕಲಚೇತನರ ಸಂಸ್ಥೆ ಸಹ ನೆರವಿಗೆ ಧಾವಿಸಿದೆ.

ಸಮರ್ಥನಂ ಸಂಸ್ಥೆ ವತಿಯಿಂದ ಇಂದು ಕೋವಿಡ್-19 ನಿಯಂತ್ರಣ ಪರಿಕರಗಳಾದ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇತರೆ ಸಾಧನಗಳನ್ನು ನೀಡಲಾಯಿತು. ಒಟ್ಟು 65 ಲಕ್ಷ ರೂ. ಮೌಲ್ಯದ ಈ ಪರಿಕರಗಳನ್ನು ಔಷಧ ನಿಯಂತ್ರಕರ ಕಚೇರಿ ಆವರಣದಲ್ಲಿ ಸಿ ವಿ ರಾಮನ್ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಮ್ಮುಖದಲ್ಲಿ ವಿತರಿಸಲಾಯಿತು.

ಈ ವೇಳೆ ಸಮರ್ಥನಂ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಮಹಾಂತೇಶ್ ಜಿ ಕಿವಡಸಣ್ಣವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.