ETV Bharat / state

ಕಳಪೆ ಗುಣಮಟ್ಟದ ಔಷಧ ಮಾರಾಟ: ಸಂಸ್ಥೆ, ಪಾಲುದಾರರ ವಿರುದ್ಧ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ - ಕಳಪೆ ಗುಣಮಟ್ಟದ ಔಷಧ ತಯಾರಿಕೆ

ಕಳಪೆ ಗುಣಮಟ್ಟದ ಔಷಧ ಮಾರಾಟ - ಹಿಂದುಸ್ತಾನ್ ಮೆಡಿಕಲ್ ಪ್ರಾಡೆಕ್ಟ್ಸ್ ಕಂಪನಿ ಮತ್ತದರ ಪಾಲುದಾರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ.

ಹೈಕೋರ್ಟ್
ಹೈಕೋರ್ಟ್
author img

By

Published : Feb 15, 2023, 10:59 PM IST

ಬೆಂಗಳೂರು : ಉತ್ತಮ ಗುಣಮಟ್ಟವಲ್ಲದ ಔಷಧಗಳನ್ನು ವಿತರಣೆ ಮಾಡಿದ ಆರೋಪ ಸಂಬಂಧ ಬಿಹಾರ ಮೂಲದ ಔಷಧಿ ತಯಾರಿಕಾ ಸಂಸ್ಥೆಯಾದ ಮೆ. ಹಿಂದುಸ್ತಾನ್ ಮೆಡಿಕಲ್ ಪ್ರಾಡೆಕ್ಟ್ಸ್ ಕಂಪನಿ ಮತ್ತದರ ಪಾಲುದಾರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆಯಡಿ ದಾಖಲಾಗಿ ಪ್ರಕರಣ ರದ್ದು ಪವನ್ ಕುಮಾರ್ ಲೋಹರುಕ ಎಂಬುವರು ಮತ್ತವರ ಪಾಲುದಾರಿಕೆಯ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಔಷಧ ಮತ್ತು ಸೌಂದರ್ಯ ವರ್ಧಕ ಕಾಯ್ದೆಯ ಸೆಕ್ಷನ್ 34ರಡಿ ಕಂಪನಿ ಎಂದರೆ ಸಂಸ್ಥೆ ಮತ್ತದರ ನಿರ್ದೇಶಕ/ಪಾಲುದಾರರು ಸೇರಿರುತ್ತಾರೆ. ಸಾಮಾನ್ಯವಾಗಿ ಪಾಲುದಾರ ಕಾಯ್ದೆಯಡಿ ವೈಯಕ್ತಿಕವಾಗಿ ಪಾಲುದಾರರು ಎಂದು ಕರೆಯುತ್ತಾರೆ. ಆದರೆ, ಒಟ್ಟಾರೆ ಬಂದಾಗ ಸಂಸ್ಥೆ ಎಂದು ಕರೆಯುತ್ತಾರೆ. ಹಾಗಾಗಿ, ಸಂಸ್ಥೆ-ಕಂಪನಿಯ ದೈನಂದಿನ ವ್ಯವಹಾರಕ್ಕೆ ಪಾಲುದಾರರು ಜವಾಬ್ದಾರರಲ್ಲ ಎಂಬುದಾಗಿ ಹೇಳಲಾಗದು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ರಾಜ್ಯ ಔಷಧ ನಿರೀಕ್ಷಕರು 2009ರ ಅ. 12ರಂದು ನೆಲಮಂಗಲದ ಔಷಧಿ ಮಳಿಗೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಔಷಧಿಗಳನ್ನು ತಪಾಸಣೆ ನಡೆಸಿದ್ದರು. ಆದರೆ, ಔಷಧವೊಂದನ್ನು ತಪಾಸಣೆಗೆ ಸರ್ಕಾರದ ಔಷಧ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ನಡೆಸಿ ನೀಡಲಾದ ವರದಿಯಲ್ಲಿ ಔಷಧವು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿಸಲಾಗಿತ್ತು.

ಇದರಿಂದ ಕರ್ನಾಟಕ ಔಷಧ ನಿಯಂತ್ರಕರಿಂದ ಪ್ರಕರಣದ ತನಿಖೆ ನಡೆಸಲು ಅನುಮತಿ ಪಡೆದಿದ್ದ ನಿರೀಕ್ಷಕರು, ಆ ಔಷಧಿ ಉತ್ಪಾದಿಸುತ್ತಿದ್ದ ಬಿಹಾರದ ಪಟ್ನಾದ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಆ ಪ್ರಕರಣವು ರದ್ದತಿಗೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಅರ್ಜಿದಾರರು ಕೇವಲ ಸಂಸ್ಥೆಯ ಪಾಲುದಾರರಾಗಿದ್ದು, ಪ್ರಕರಣಕ್ಕೆ ಅವರು ಹೊಣೆಗಾರರಲ್ಲ. ಔಷಧ ತಯಾರಿಸುವ ತಾಂತ್ರಿಕ ಸಿಬ್ಬಂದಿಯು ಘಟನೆಗೆ ಕಾರಣ ಮತ್ತು ಹೊಣೆಗಾರರಾಗಿದ್ದಾರೆ ಎಂದು ಪವನ್ ಕುಮಾರ್ ಅವರ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್ ಪರ ರಾಜ್ಯ ಸರ್ಕಾರಿ ವಕೀಲರು, ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಪ್ರಕರಣದಲ್ಲಿ ಉತ್ಪಾದನಾ ಸಂಸ್ಥೆಯೊಂದಿಗೆ ಪಾಲುದಾರರು ಸಹ ಸಮಾನ ಹೊಣೆಗಾರಿಕೆ ಹೊಂದಿರುತ್ತಾರೆ. ಹಾಗೊಂದು ವೇಳೆ ಔಷಧಿ ತಯಾರಿಕೆಯಲ್ಲಿ ಕಂಪನಿಯ ಪಾಲುದಾರ ಹೊಣೆಯಾಗಿರುವುದಿಲ್ಲ ಎನ್ನುವುದಾದರೆ ಅದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಬೇಕಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ : ವಾಸ್ತು ಶಿಲ್ಪ ಪರಿಷತ್​ಗೆ ಸದಸ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನು ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ. ಕಳಪೆ ಗುಣಮಟ್ಟದ ಔಷಧ ತಯಾರಿಕೆಗೆ ಅರ್ಜಿದಾರರು ಹೊಣೆಗಾರರಲ್ಲ ಎಂಬ ಅಂಶವು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿಯೇ ಸಾಬೀತಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ : ಭಿಕ್ಷಾಟನೆ ತಡೆ ಕಾಯಿದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.