ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಗಾಂಜಾ ಮಾರಾಟ ಮಾಡುವವರ ಮೇಲೆ ಎಷ್ಟೇ ದಾಳಿ ನಡೆಸಿದ್ರೂ, ಆರೋಪಿಗಳು ಮಾತ್ರ ಗಾಂಜಾ ಮಾರಾಟ ಮಾಡುವ ಚಾಳಿ ಬಿಡ್ತಿಲ್ಲ. ಸದ್ಯ ಗಾಂಜಾ ಮಾರಾಟ ಮಾಡುತ್ತಿದ್ದ, ಅಂತರ್ರಾಜ್ಯದ ಇಬ್ಬರು ಆರೋಪಿಗಳನ್ನ ಉತ್ತರ ವಿಭಾಗದ ಜೆ.ಸಿ. ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿ ಬಳಿಯ ಯುಟಿಸಿ ಕಾಲೇಜ್ ಬಳಿ ಕಾರಿನಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಬಂದಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸನ್ನದ್ ಹಾಗೂ ಮೊಹಮ್ಮದ್ ಬಿಲಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಓದಿ: ಎರಡು ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದರು ಡಿಎಸ್ಪಿ ಲಕ್ಷ್ಮಿ
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾವನ್ನ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಟ್ರಕ್ನಲ್ಲಿ ನಗರಕ್ಕೆ ತರುತ್ತಿದರು. ತದನಂತರ ವಿದ್ಯಾರ್ಥಿಗಳಿಗೆ, ಯುವಕರಿಗೆ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ 10.ಕೆ.ಜಿ ಗಾಂಜಾ, ನಗದು ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ.