ETV Bharat / state

ಅಭಿಯೋಜಕರಿಗೆ ವೇತನ ತಾರತಮ್ಯ, ಸಿಗದ ಪದೋನ್ನತಿ; ಪಿಪಿ, ಎಪಿಪಿಗಳ ಬೇಸರ

ತಹಶೀಲ್ದಾರ್, ಡಿವೈಎಸ್ ಪಿ, ವೈದ್ಯಾಧಿಕಾರಿ, ಸಿಟಿಒ, ಎಸಿಎಫ್ ಹುದ್ದೆಗಳಿಗೆ ಪದವಿ ಬಳಿಕ ನೇರವಾಗಿ ಆಯ್ಕೆಯಾಗಬಹುದು. ಆದರೆ ಎರಡು ಪದವಿಗಳನ್ನು ಪಡೆದುಕೊಂಡ ವಕೀಲರು ಎಪಿಪಿ ಹುದ್ದೆಗೆ ನೇಮಕವಾಗಬೇಕಿದ್ದರೆ ಕನಿಷ್ಠ 3 ವರ್ಷ ವಕೀಲ ವೃತ್ತಿ ನಿರ್ವಹಿಸಿದ ಅನುಭವವಿರಬೇಕು. ಹೀಗೆ ಸಾಕಷ್ಟು ಓದು, ಅನುಭವದ ನಂತರವೂ ಅತೀ ಕಡಿಮೆ ಸಂಬಳಕ್ಕೆ ಎಪಿಪಿಗಳು ಹಾಗೂ ಪಿಪಿಗಳು ಕಾರ್ಯನಿರ್ವಹಿಸಬೇಕಿದೆ.

author img

By

Published : Mar 6, 2021, 9:31 PM IST

Salary discrimination for prosecutors, PP-APPs angry to government
ಪ್ರಧಾನ ಸರ್ಕಾರಿ ಅಭಿಯೋಜಕ ಚನ್ನಪ್ಪ ಜಿ. ಹರಸೂರ

ಬೆಂಗಳೂರು: ದಿನವಿಡೀ ಕೋರ್ಟ್​​ಗಳ ಸುತ್ತಾಟ, ಸಿಬ್ಬಂದಿ, ಸೌಲಭ್ಯಗಳ ಕೊರತೆ ನಡುವೆಯೂ ಸರ್ಕಾರದ ಪ್ರಕರಣಗಳಲ್ಲಿ ಸಮರ್ಥವಾಗಿ ವಕಾಲತ್ತು ವಹಿಸಬೇಕಾದ ಅನಿವಾರ್ಯತೆ. ಜೊತೆಗೆ ವರ್ಷಪೂರ್ತಿ ದುಡಿದರೂ ಸಿಗದ ಸೂಕ್ತ ವೇತನ. ಇದು ಅಭಿಯೋಜನೆ ಇಲಾಖೆಯಲ್ಲಿ ಕೆಲಸ ಮಾಡುವ ಎಪಿಪಿಗಳು ಹಾಗೂ ಪಿಪಿಗಳು ಕಳೆದ 20 ವರ್ಷಗಳಿಂದ ಎದುರಿಸುತ್ತಿರುವ ಸಂಕಷ್ಟ.

ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಹೀಗಾಗಿಯೇ ಕಳೆದ 20 ವರ್ಷಗಳಿಂದ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಹಾಗೂ ಸರ್ಕಾರಿ ಅಭಿಯೋಜಕ (ಪಿಪಿ) ಹುದ್ದೆಗಳನ್ನು ಸರ್ಕಾರ ಉನ್ನತೀಕರಣಗೊಳಿಸಿಲ್ಲ. ಜತೆಗೆ ಸೂಕ್ತ ವೇತನವನ್ನೂ ನೀಡುತ್ತಿಲ್ಲ. ಹೀಗಾಗಿ ಅಭಿಯೋಜಕರ ಜತೆಗೆ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸಬೇಕಿದ್ದ ಅಭಿಯೋಜನೆ ಕೂಡ ದುರ್ಬಲಗೊಳ್ಳುತ್ತಿದೆ.

ಅಭಿಯೋಜಕರಿಗೆ ವೇತನ ತಾರತಮ್ಯ, ಸಿಗದ ಪದೋನ್ನತಿ

ದೇಶದಲ್ಲೇ ಮೊದಲಿಗೆ ಅಭಿಯೋಜನೆ ಇಲಾಖೆಯನ್ನು ವ್ಯವಸ್ಥಿತವಾಗಿ ಸ್ಥಾಪಿಸಿದ ಹೆಗ್ಗಳಿಕೆ ರಾಜ್ಯಕ್ಕಿದೆ. ಆದರೆ ಇಲಾಖೆಗೆ ಅದರ ಭಾಗವಾಗಿ ಕೆಲಸ ಮಾಡುವ ಅಭಿಯೋಜಕರಿಗೆ ನೀಡಬೇಕಾದ ಸವಲತ್ತುಗಳನ್ನು ಇಂದಿಗೂ ಸರಿಯಾಗಿ ನೀಡಿಲ್ಲ. ಪ್ರಾಸಿಕ್ಯೂಷನ್ ಇಲಾಖೆಯನ್ನು ಆರಂಭದಲ್ಲಿ ಕಾನೂನು ಇಲಾಖೆ ಅಡಿಯಲ್ಲಿ ಪ್ರಾರಂಭಿಸಲಾಗಿತ್ತು. ನಂತರ ಗೃಹ ಇಲಾಖೆ ವ್ಯಾಪ್ತಿಗೆ ತರಲಾಯಿತು.

ಇಲಾಖೆ ಆರಂಭದಲ್ಲಿ ಎಪಿಪಿಗಳ ಹುದ್ದೆಗಳನ್ನು ಕ್ಲಾಸ್-2 ಅಡಿ ಪರಿಗಣಿಸಲಾಗಿತ್ತು. ಇದೇ ಕ್ಲಾಸ್-2 ವ್ಯಾಪ್ತಿಯಲ್ಲಿ ತಹಶೀಲ್ದಾರ್, ಡಿವೈಎಸ್​ಪಿ, ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ (ಸಿಟಿಒ) ವೈದ್ಯಾಧಿಕಾರಿ, ಎಸಿಎಫ್ ಹುದ್ದೆಗಳೂ ಇದ್ದವು. ಕಾಲಾಂತರದಲ್ಲಿ ಈ 5 ಹುದ್ದೆಗಳಲ್ಲಿ ಎಪಿಪಿ ಹೊರತುಪಡಿಸಿ 4ನ್ನು ಕ್ಲಾಸ್-1ಗೆ ಉನ್ನತೀಕರಿಸಲಾಯಿತು. ಅದರಂತೆ ಈ ಅಧಿಕಾರಿಗಳ ವೇತನ-ಸವಲತ್ತುಗಳು ಕೂಡ ಏರಿಕೆಯಾದವು. ಆದರೆ ಎಪಿಪಿಗಳ ಹುದ್ದೆಗಳು ಉನ್ನತೀಕರಣಗೊಳ್ಳಲಿಲ್ಲ. ಸಂಬಳ-ಸವಲತ್ತುಗಳೂ ಏರಿಕೆಯಾಗಲಿಲ್ಲ.

ತಹಶೀಲ್ದಾರ್, ಡಿವೈಎಸ್​ಪಿ, ವೈದ್ಯಾಧಿಕಾರಿ, ಸಿಟಿಒ, ಎಸಿಎಫ್ ಹುದ್ದೆಗಳಿಗೆ ಪದವಿ ಬಳಿಕ ನೇರವಾಗಿ ಆಯ್ಕೆಯಾಗಬಹುದು. ಆದರೆ ಎರಡು ಪದವಿಗಳನ್ನು ಪಡೆದುಕೊಂಡ ವಕೀಲರು ಎಪಿಪಿ ಹುದ್ದೆಗೆ ನೇಮಕವಾಗಬೇಕಿದ್ದರೆ ಕನಿಷ್ಠ 3 ವರ್ಷ ವಕೀಲ ವೃತ್ತಿ ನಿರ್ವಹಿಸಿದ ಅನುಭವವಿರಬೇಕು. ಹೀಗೆ ಸಾಕಷ್ಟು ಓದು, ಅನುಭವದ ನಂತರವೂ ಅತೀ ಕಡಿಮೆ ಸಂಬಳಕ್ಕೆ ಎಪಿಪಿಗಳು ಹಾಗೂ ಪಿಪಿಗಳು ದುಡಿಯಬೇಕಿದೆ.

ಎಪಿಪಿ ಹಾಗೂ ಪಿಪಿ ಹುದ್ದೆಗಳನ್ನು ಈವರೆಗೆ ಬಂದ ಯಾವುದೇ ಸರ್ಕಾರಗಳೂ ಉನ್ನತೀಕರಿಸುವ ಕೆಲಸ ಮಾಡಿಲ್ಲ. ಸರ್ಕಾರಗಳ ಈ ನಡವಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸುವ ಎಪಿಪಿಗಳು ಹಾಗೂ ಪಿಪಿಗಳು ತಮಗೂ ಇತರೆ ಇಲಾಖೆಗಳಲ್ಲಿ ನೀಡಿರುವಂತೆ ಸೂಕ್ತ ವೇತನ-ಸೌಲಭ್ಯಗಳನ್ನು ನೀಡುವಂತೆ ಸಂದರ್ಭಾನುಸಾರ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರಗಳು ಮಾತ್ರ ಕುರುಡಾಗಿ ವರ್ತಿಸುತ್ತಿವೆ.

ಸರ್ಕಾರಿ ಅಭಿಯೋಜಕರ ಸಂಕಷ್ಟಗಳ ಕುರಿತು ಮಾತನಾಡಿರುವ ಪ್ರಧಾನ ಸರ್ಕಾರಿ ಅಭಿಯೋಜಕ ಚನ್ನಪ್ಪ ಜಿ. ಹರಸೂರ ಅವರು, 1994ರಲ್ಲಿ ಎಪಿಪಿ ಹುದ್ದೆಗೆ ಸೇರಿದಾಗ 2000 ರೂಪಾಯಿ ವೇತನ ನೀಡಲಾಗುತ್ತಿತ್ತು. ನ್ಯಾಯಾಧೀಶರ ವೇತನ 2,200 ರೂಪಾಯಿ ಇತ್ತು. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರು ಸಂಬಳದ ವಿಷಯಕ್ಕೆ ಬಂದರೆ ಎಪಿಪಿ ಕೆಲಸವೇ ಉತ್ತಮ ಎನ್ನುತ್ತಿದ್ದರು.

ಆದರೀಗ ನ್ಯಾಯಾಧೀಶರು ಮತ್ತು ಎಪಿಪಿಗಳ ನಡುವಿನ ಸಂಬಳ ಅಜಗಜಾಂತರವಾಗಿದೆ. ನ್ಯಾಯಾಧೀಶರಿರಲಿ ಒಂದೇ ಹಂತದಲ್ಲಿ ಕೆಲಸ ಮಾಡುತ್ತಿದ್ದ ತಹಶೀಲ್ದಾರ್ ಹುದ್ದೆಯ ಸ್ಥಾನಮಾನವನ್ನೂ ನೀಡಿಲ್ಲ. 5ನೇ ವೇತನ ಆಯೋಗದಲ್ಲಿ ಸಕಾರಣವಿಲ್ಲದೆಯೂ ವೇತನ ಪರಿಷ್ಕರಣೆ ಕೈಬಿಟ್ಟರು ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ ಡಿಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.