ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿದ್ದ ರಾಜ್ಯದ 96 ಜನ ಸುರಕ್ಷಿತ: ಆರ್ ಅಶೋಕ್ - bengalore latest news
ಕಲಬುರಗಿ ಭೂಕಂಪದ ಸ್ಥಳಕ್ಕೆ ಹೋಗಿದ್ದೆ. ಕುಟುಂಬದ ಜೊತೆ ಮಾತನಾಡಿದ್ದೇನೆ. ಕೆಳ ಪದರದಲ್ಲಿ ಸುಣ್ಣದ ಅಂಶ ಜಾಸ್ತಿ ಇರುವುದರಿಂದ, ಈ ರೀತಿ ಆಗ್ತಿದೆ ಅಂತ ವರದಿ ಬಂದಿದೆ. ಶೆಡ್ ಹಾಕುವ ಕೆಲಸ ಮಾಡಲಾಗ್ತಿದೆ. ಅದಕ್ಕೆ ಕಂದಾಯ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆಂಗಳೂರು: ಉತ್ತರಾಖಂಡ ಪ್ರವಾಹಕ್ಕೆ ರಾಜ್ಯದ ಒಟ್ಟು 96 ಜನ ಸಿಲುಕಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಉತ್ತರಖಂಡ್ಗೆ ಜನರು ಪ್ರವಾಸ ಹೋಗಿದ್ದರು. ಅವರ ರಕ್ಷಣೆಗೆ ತಂಡ ರಚಿಸಿ ಹೆಲ್ಪ್ ಲೈನ್ ಮಾಡಲಾಗಿದೆ. ಹತ್ತು ಕುಟುಂಬದಿಂದ ಕರೆ ಬಂದಿದ್ದು, ಉತ್ತರಾಖಂಡ ರಾಜ್ಯದ ಜೊತೆ ಸಂಪರ್ಕ ಮಾಡಲಾಗಿದೆ. ಅವರ ಕುಟುಂಬದ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.
ಎಲ್ಲರನ್ನೂ ಕರೆತರುವ ಕೆಲಸ ಮಾಡಲಾಗ್ತಿದೆ. ನಮ್ಮನ್ನು ಸಂಪರ್ಕ ಮಾಡಿದ್ರೆ, ಉಳಿದವರ ರಕ್ಷಣೆ ಮಾಡಲಾಗುವುದು. ಬೆಂಗಳೂರಿನಿಂದ ಯಲಹಂಕ, ರಾಜಾಜಿನಗರ, ಪೀಣ್ಯ, ಸಿಂದಗಿ, ಉಡುಪಿ ವಿವಿಧೆಡೆಯಿಂದ ಉತ್ತರಾಖಂಡ ಪ್ರವಾಸ ಹೋಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದರು.
ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ಗುಡ್ಡ ಕುಸಿತ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯೋ ಕೆಲಸ ಮಾಡಲಾಗುತ್ತಿದೆ. ಮಳೆಯಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗ್ತಿದೆ. ಏನೇ ಸಮಸ್ಯೆ ಆದ್ರೂ, ಅದನ್ನ ಸರ್ಕಾರ ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.
ಕಲಬುರಗಿ ಭೂಕಂಪದ ಸ್ಥಳಕ್ಕೆ ಹೋಗಿದ್ದೆ. ಕುಟುಂಬದ ಜೊತೆ ಮಾತನಾಡಿದ್ದೇನೆ. ಕೆಳ ಪದರದಲ್ಲಿ ಸುಣ್ಣದ ಅಂಶ ಜಾಸ್ತಿ ಇರೋದ್ರಿಂದ, ಈ ರೀತಿ ಆಗ್ತಿದೆ ಅಂತ ವರದಿ ಬಂದಿದೆ. ಶೆಡ್ ಹಾಕುವ ಕೆಲಸ ಮಾಡಲಾಗ್ತಿದೆ. ಅದಕ್ಕೆ ಕಂದಾಯ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುವುದು. ಬಿಜಾಪುರದಲ್ಲೂ ಇಂತದ್ದೇ ಘಟನೆ ಆಗಿದೆ. ವಿಜ್ಞಾನಿಗಳು ನೀಡಿರೋ ವರದಿ ಪ್ರಕಾರ ಏನೂ ಆಗೋದಿಲ್ಲ. ಒಂದು ವಾರದಲ್ಲಿ ವರದಿ ಬರಲಿದ್ದು, ಬಳಿಕ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಕೇರಳ ಭೂ ಕುಸಿತ ಸಂಬಂಧ ಪ್ರತಿಕ್ರಿಯಿಸಿದ ಅವರು, ಕೇರಳಕ್ಕೆ ಈಗಾಗಲೇ ಸಿಎಂ ಸಹಾಯಹಸ್ತ ನೀಡೋದಾಗಿ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಬಟ್ಟೆ, ಟೂತ್ ಪೇಸ್ಟ್, ಬ್ರಶ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಡಿಸೋ ಕೆಲಸ ಮಾಡಲಾಗ್ತಿದೆ. ಸತೀಶ್ ರೆಡ್ಡಿ ಅದರ ಜವಾಬ್ದಾರಿ ಹೊತ್ತಿದ್ದಾರೆ ಎಂದು ಮಾಹಿತಿ ನೀಡಿದರು.