ETV Bharat / state

ಕ್ಯಾಬಿನೆಟ್ ಸಚಿವರಾಗಿ ಸುಧಾಕರ್ ಬಾಲಿಶ ಹೇಳಿಕೆ ದುರದೃಷ್ಟಕರ : ಹಿರಿಯ ಪತ್ರಕರ್ತ ಎಂ.ಸಿದ್ದರಾಜು - statement as Cabinet Minister

ಬೇಜವಾಬ್ದಾರಿ ಹೇಳಿಕೆಗಳು ಸುಮ್ಮನೆ ವಿವಾದಗಳನ್ನು ಹುಟ್ಟಿ ಹಾಕುತ್ತವೆ ಹೊರೆತು, ಇದರಿಂದ ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ತಮ್ಮ ಬಾಲಿಶ ಹೇಳಿಕೆಯಿಂದ ತಮ್ಮನ್ನು ತಾವು ಜನರ ಕಣ್ಣಲ್ಲಿ ಸಣ್ಣವರನ್ನಾಗಿಸಿಕೊಂಡಿದ್ದಾರೆ..

ಎಂ.ಸಿದ್ದರಾಜು
ಎಂ.ಸಿದ್ದರಾಜು
author img

By

Published : Mar 24, 2021, 11:01 PM IST

ಬೆಂಗಳೂರು : ಆರೋಗ್ಯ ಸಚಿವರ ಏಕ ಪತ್ನಿ ವ್ರತಸ್ಥ ಪ್ರಮಾಣಪತ್ರ ಹಾಗೂ ರಾಜ್ಯದ 225 ಎಂಎಲ್​ಎಗಳು ಚಾರಿತ್ರ್ಯದ ಪರೀಕ್ಷೆ ಆಗಬೇಕು ಎಂಬ ಹೇಳಿಕೆಗೆ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಎಂ ಸಿದ್ದರಾಜು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಒಬ್ಬ ಕ್ಯಾಬಿನೆಟ್ ಸಚಿವನಾಗಿ ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ, ಸಾಮಾನ್ಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟರು.

ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಮಾಧ್ಯಮ ಅಕಾಡೆಮಿ ಮಾಜಿ ಛೇರ್ಮನ್ ಎಂ.ಸಿದ್ದರಾಜು

ಬೇಜವಾಬ್ದಾರಿ ಹೇಳಿಕೆ ನೀಡಿ ತಮ್ಮನ್ನು ತಾವೇ ಸಂಕಷ್ಟಕ್ಕೆ ಸಿಲಿಕಿಸಿಕೊಂಡಿದ್ದು, ಈ ಹೇಳಿಕೆ ನಮ್ಮನ್ನಾಳುವ ಸರ್ಕಾರದ ಹಿರಿಯ ಸಚಿವನಿಂದ ಬಂದಿರುವುದು ತುಂಬಾ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ಜನಪ್ರತಿನಿಧಿಗಳು ತಮ್ಮ ಹೆಂಡತಿಯರ ಜೊತೆ ನಿಷ್ಠರಾಗಿಲ್ಲ ಎನ್ನುವಂತಿದೆ. ರಾಜ್ಯದ 225 ಜನಪ್ರಧಿನಿಧಿಗಳಲ್ಲಿ 7 ಮಹಿಳಾ ಶಾಸಕಿಯರಿದ್ದಾರೆ ಎಂಬುದನ್ನು ಸಚಿವರು ಮರೆತಂತಿದೆ.

ಬೇಜವಾಬ್ದಾರಿ ಹೇಳಿಕೆಗಳು ಸುಮ್ಮನೆ ವಿವಾದಗಳನ್ನು ಹುಟ್ಟಿ ಹಾಕುತ್ತವೆ ಹೊರೆತು, ಇದರಿಂದ ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ತಮ್ಮ ಬಾಲಿಶ ಹೇಳಿಕೆಯಿಂದ ತಮ್ಮನ್ನು ತಾವು ಜನರ ಕಣ್ಣಲ್ಲಿ ಸಣ್ಣವರನ್ನಾಗಿಸಿಕೊಂಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.